Select Your Language

Notifications

webdunia
webdunia
webdunia
webdunia

ಮಹಿಳೆಯರು ಸುರಕ್ಷಿತವಾಗಿದ್ದರೆ ಭಾರತದ ಪ್ರಗತಿ ಸಾಧ್ಯ : ರಾಹುಲ್ ಗಾಂಧಿ

ಮಹಿಳೆಯರು ಸುರಕ್ಷಿತವಾಗಿದ್ದರೆ ಭಾರತದ ಪ್ರಗತಿ ಸಾಧ್ಯ : ರಾಹುಲ್ ಗಾಂಧಿ
ನವದೆಹಲಿ , ಭಾನುವಾರ, 25 ಸೆಪ್ಟಂಬರ್ 2022 (08:19 IST)
ನವದೆಹಲಿ : ಉತ್ತರಪ್ರದೇಶದ ಮೊರದಾಬಾದ್ ಅತ್ಯಾಚಾರ ಪ್ರಕರಣ ಹಾಗೂ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಯುವತಿ ಹತ್ಯೆ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆಯರು ಸುರಕ್ಷಿತವಾಗಿ ಇದ್ದರೆ ಮಾತ್ರವೇ ಭಾರತ ಪ್ರಗತಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಟನೆಗೆ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, `ಮೊರಾದಾಬಾದ್ ಮತ್ತು ಉತ್ತರಾಖಂಡದಲ್ಲಿ ನಡೆದ ಘಟನೆಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಭಾರತ್ ಜೋಡೋ ಯಾತ್ರೆಯಲ್ಲಿ ಅನೇಕ ಪ್ರತಿಭಾವಂತ ಮಹಿಳೆಯರು ಹಾಗೂ ಯುವತಿಯರನ್ನು ಭೇಟಿಯಾಗುತ್ತಿದ್ದೇನೆ.

ಅವರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇದ್ದಾಗ ಮಾತ್ರವೇ ನಮ್ಮ ಭಾರತ ಪ್ರಗತಿಯಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಗೆ ಬುದ್ದಿ ಹೇಳಿದ್ದೇ ತಪ್ಪಾಯ್ತ! ಶಿಕ್ಷಕನಿಗೆ ಗುಂಡೇಟು?