ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ಕೆಣಕಿದರೆ ಪ್ರತಿದಾಳಿ ನಡೆಸಲು ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ನಿನ್ನೆ ಸಂಜೆ 5 ಗಂಟೆಯಿಂದ ಅಮೆರಿಕಾ ಸಲಹೆಯಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿತ್ತು. ಹಾಗಿದ್ದರೂ ಪಾಕಿಸ್ತಾನ ಕೆಲವೇ ನಿಮಿಷಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿತ್ತು.
ಇದರ ಬೆನ್ನಲ್ಲೇ ಭಾರತದಲ್ಲಿ ಕದನ ವಿರಾಮಕ್ಕೆ ಒಪ್ಪಿದ್ದಕ್ಕೆ ಅಸಮಾಧಾನ ಶುರುವಾಗಿತ್ತು. ಇಂದು ಸಭೆ ನಡೆಸಿರುವ ಭಾರತೀಯ ಸೇನೆ ಒಂದು ವೇಳೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದರೆ ಪ್ರತಿದಾಳಿ ನಡೆಸಿ ಎಂದು ವಿಂಗ್ ಕಮಾಂಡರ್ ಗಳಿಗೆ ಆದೇಶ ನೀಡಿದೆ.
ನಿನ್ನೆ ಸಂಜೆ ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ಭಾರತದ ನಾಗರಿಕ ಪ್ರದೇಶದ ಮೇಲೆ ಡ್ರೋಣ್ ದಾಳಿ ನಡೆಸಿತ್ತು. ಇಂದೂ ಇದೇ ರೀತಿ ನಡೆದರೆ ಭಾರತದಿಂದಲೂ ತಕ್ಕ ಪ್ರತ್ಯುತ್ತರ ನಿರೀಕ್ಷಿಸಬಹುದಾಗಿದೆ.