Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 38 ಸಾವಿರದ 948 ಸಕ್ರಿಯ ಕೇಸು, 219 ಮಂದಿ ಸಾವು

webdunia
ಸೋಮವಾರ, 6 ಸೆಪ್ಟಂಬರ್ 2021 (10:32 IST)
ನವದೆಹಲಿ : ಕೊರೋನಾ ಮೂರನೇ ಅಲೆ ಭೀತಿ ನಡುವೆಯೇ ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಮೊನ್ನೆಗಿಂತ ಸ್ವಲ್ಪ ಕಡಿಮೆಯಾಗಿದೆ. ಕಳೆದ 1 ದಿನದಲ್ಲಿ ದೇಶದಲ್ಲಿ 38 ಸಾವಿರದ 948 ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 219 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ.

ಪ್ರಸ್ತುತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿಯ 30 ಲಕ್ಷದ 27 ಸಾವಿರದ 621ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4 ಲಕ್ಷದ 40 ಸಾವಿರದ 752ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷದ 04 ಸಾವಿರದ 874ರಲ್ಲಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ವರದಿಯಾದ 38,948 ಹೊಸ ಪ್ರಕರಣಗಳು ಮತ್ತು 219 ಸಾವುಗಳಲ್ಲಿ, ಕೇರಳ ರಾಜ್ಯದಲ್ಲಿ 26,701 ಪ್ರಕರಣಗಳು ಮತ್ತು ನಿನ್ನೆ 74 ಸಾವುಗಳನ್ನು ಕಂಡಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 43 ಸಾವಿರದ 903 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3 ಕೋಟಿಯ 21 ಲಕ್ಷದ 81 ಸಾವಿರದ 995ಕ್ಕೆ ತಲುಪಿದೆ.
ಕಳೆದ 73 ದಿನಗಳಲ್ಲಿ ವಾರದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇಕಡಾ 2.58ರಷ್ಟಿದ್ದು, ದಿನಂಪ್ರತಿಯ ಪಾಸಿಟಿವ್ ದರ ಶೇಕಡಾ 2.76ರಷ್ಟು ಕಳೆದ 7 ದಿನಗಳಲ್ಲಿ ದಾಖಲಾಗಿದೆ. ಇದುವರೆಗೆ ದೇಶದಲ್ಲಿ 53.14 ಕೋಟಿ ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು ರಾಷ್ಟ್ರಾದ್ಯಂತ ಲಸಿಕಾ ಅಭಿಯಾನದಲ್ಲಿ 68.75 ಕೋಟಿ ಡೋಸ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಸಭಾಪತಿಗೆ ನಿವೇಶನ ನೀಡದಿರುವುದು ಒಳ್ಳೆಯ ಕ್ರಮವಲ್ಲ: ದಿನೇಶ್ ಗುಂಡೂರಾವ್