Publish Date: Mon, 06 Sep 2021 (10:31 IST)
Updated Date: Mon, 06 Sep 2021 (09:08 IST)
ಬೆಂಗಳೂರು, ಸೆ.06 : ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರ ನಿವೇಶನ ನೀಡದಿರುವುದು ಒಳ್ಳೆಯ ಕ್ರಮವಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು ಸಭಾಪತಿ ಸ್ಥಾನಕ್ಕೆ ಅದರದ್ದೇ ಆದ ಘನತೆ, ಗೌರವವಿದೆ. ಅವರಿಗೆ ಸರ್ಕಾರ ನಿವೇಶನ ನೀಡದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸ್ವತಃ ಸಭಾಪತಿಯವರೇ ನಿವಾಸ ಕೇಳುವುದು ಮುಜುಗರದ ಸನ್ನಿವೇಶ. ಸರ್ಕಾರ ಕೂಡಲೇ ಸಭಾಪತಿ ಹೊರಟ್ಟಿ ಅವರಿಗೆ ನಿವಾಸ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಭಾಪತಿ ಹೊರಟ್ಟಿ ಅವರು ತಮಗೆ ಸರ್ಕಾರ ನಿವಾಸ ನೀಡಿಲ್ಲ ಎಂದು ಪತ್ರ ಬರೆದಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಹಲವಾರು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಸರ್ಕಾರ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ ಎಂದು ಕೂಡ ಹೇಳಿದ್ದರು.