Select Your Language

Notifications

webdunia
webdunia
webdunia
Friday, 11 April 2025
webdunia

ಪ್ರಧಾನಿ ಮೋದಿ ಪ್ರಮಾಣ ವಚನಕ್ಕೆ ಇಮ್ರಾನ್ ಖಾನ್ ಬಿಟ್ಟು ಉಳಿದ ನಾಯಕರಿಗೆ ಆಹ್ವಾನ

ಪ್ರಧಾನಿ ಮೋದಿ
ನವದೆಹಲಿ , ಮಂಗಳವಾರ, 28 ಮೇ 2019 (12:43 IST)
ನವದೆಹಲಿ: ಎರಡನೇ ಬಾರಿಗೆ  ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೇರುತ್ತಿರುವ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಾಳೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದ್ದು ನೆರೆಯ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಿಟ್ಟು ಉಳಿದ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ.


ಭಾರತದ ನೆರೆಯ ರಾಷ್ಟ್ರಗಳ ಎಲ್ಲಾ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ, ಮ್ಯಾನ್ಮಾರ್ ದೇಶದ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಆದರೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರನ್ನು ಆಹ್ವಾನಿತರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇತ್ತೀಚೆಗೆ ಪುಲ್ವಾಮಾ ದಾಳಿಯ ನಂತರ ಉಭಯ ದೇಶಗಳ ಸಂಬಂಧ ಸಂಪೂರ್ಣ ಹಳಸಿದ್ದು ಈ ಹಿನ್ನಲೆಯಲ್ಲಿ ಪಾಕ್ ನಾಯಕನನ್ನು ಆಹ್ವಾನಿಸಲಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನೀನೂ ಒಬ್ಬ ಲೀಡರಾ? ಸಚಿವ ಪುಟ್ಟರಂಗಶೆಟ್ಟಿಗೆ ಸಿದ್ಧರಾಮಯ್ಯ ಫುಲ್ ಕ್ಲಾಸ್