Select Your Language

Notifications

webdunia
webdunia
webdunia
webdunia

ವಿಧವೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಯುವಕನಿಗೆ ಏನ್ ಮಾಡಿದ್ರೂ ಗೊತ್ತಾ?

ವಿಧವೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಯುವಕನಿಗೆ ಏನ್ ಮಾಡಿದ್ರೂ ಗೊತ್ತಾ?
patna , ಮಂಗಳವಾರ, 28 ನವೆಂಬರ್ 2023 (08:02 IST)
ಅಕ್ರಮ ಸಂಬಂಧದಿಂದ ಕಷ್ಟಗಳು ಎದುರಾಗುತ್ತವೆ ಎನ್ನುವುದು ಗೊತ್ತಿದ್ದರೂ ಕೂಡಾ ಕೆಲವರು ಅದನ್ನೇ ಮುಂದುವರಿಸಿಕೊಂಡ ಹೋಗಿರುವವರನ್ನು ನಾವು ನೋಡಿದ್ದೇವೆ. ಕೊನೆಗ ಅದರಲ್ಲಿಯೇ ಜೀವನ ಕಳೆದುಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಇತಹ ಘಟನೆ ಇದೀಗ ಮತ್ತೊಮ್ಮೆ ವರದಿಯಾಗಿದೆ.
 
ವಿಧವೆ ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಸಹೋದರರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಿಹಾರ್‌ದಲ್ಲಿ ನಡೆದಿದೆ.
 
ಹರೀಶ್ (29) ಕೊಲೆಯಾದ ವ್ಯಕ್ತಿ, ನಾಗರಾಜ, ಮಾರುತಿ, ರಾಘವೇಂದ್ರ ಹಾಗೂ ರಮೇಶ್ ಕೊಲೆಮಾಡಿದ ಆರೋಪಿಗಳು. ಡಾಬಾದಲ್ಲಿ ಅಡುಗೆ ಭಟ್ಟನಾಗಿದ್ದ ಹರೀಶ್ ಗೆ ಅಲ್ಲಿ ಕೆಲಸಮಾಡುತ್ತಿದ್ದ ವಿಧವಾ ಮಹಿಳೆಯೊಬ್ಬಳು ಪರಿಚಯವಾಗಿದ್ದಾಳೆ. ಬಳಿಕ ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಈ ವಿಚಾರ ತಿಳಿದ ಮಹಿಳೆಯ ಸಹೋದರರು ಹರೀಶ್ ಗೆ ತನ್ನ ಅಕ್ಕನಿಂದ ದೂವಿರುವಂತೆ ಎಚ್ಚರಿಕೆ ಕೊಟ್ಟಿದ್ದರು.
 
ಆದರೆ ಹರೀಶ್ ತನ್ನ  ಅಕ್ರಮ ಸಂಬಂಧವನ್ನು ಮುಂದುವರಿಸಿದ್ದ. ಇದರಿಂದ ಕೋಪಗೊಂಡ ಆಕೆಯ ಸಹೋದರರು ಹರೀಶ್ ಮೇಲೆ ಹಲ್ಲೆ ಮಾಡಿ ನಿರ್ಜನ ಪ್ರದೇಶ‍ಕ್ಕೆ ಎಳೆದೊಯ್ದು ಕೊಲೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹರಿಹರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧದ ವಿಡಿಯೋ ವೈರಲ್: ಪತ್ನಿಯ ಪ್ರಿಯಕರನ ಹತ್ಯೆಗೈದ ಪತಿ