Select Your Language

Notifications

webdunia
webdunia
webdunia
webdunia

ಕೆಲವರಿಗೆ ನಮ್ಮ ಸರ್ಕಾರ ಟೀಕಿಸದಿದ್ರೆ ನಿದ್ದೆ ಬರೋಲ್ಲ: ಪ್ರಧಾನಿ ಮೋದಿ

ಕೆಲವರಿಗೆ ನಮ್ಮ ಸರ್ಕಾರ ಟೀಕಿಸದಿದ್ರೆ ನಿದ್ದೆ ಬರೋಲ್ಲ: ಪ್ರಧಾನಿ ಮೋದಿ
ನವದೆಹಲಿ: , ಬುಧವಾರ, 4 ಅಕ್ಟೋಬರ್ 2017 (18:53 IST)
ಕೆಲವರಿಗೆ ನಮ್ಮ ಸರ್ಕಾರವನ್ನು ಟೀಕಿಸದಿದ್ರೆ ನಿದ್ದೆ ಬರೋಲ್ಲ. ಸರಕಾರವನ್ನು ಟೀಕಿಸುವುದೇ ವಿಪಕ್ಷಗಳ ಕಾಯಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾದ ಇನ್‌ಸ್ಟಿಟ್ಯೂಟ್‌ ಆಫ್ ಕಂಪೆನಿ ಸೆಕ್ರೆಟರೀಸ್ ಸ್ವರ್ಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಕಪ್ಪು ಹಣದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಪ್ಪು ಹಣದ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
 
ಸತ್ಯ ಹೇಳುವುದು ಮತ್ತು ಧರ್ಮಪಾಲಿಸುವುದು ನಮ್ಮ ಧ್ಯೇಯವಾಗಿದೆ. ನಮ್ಮ ಸರಕಾರ ಸತ್ಯದ ಪರವಾಗಿದೆ. ಭ್ರಷ್ಟಾಚಾರಿಗಳ ವಿರೋಧಿಯಾಗಿದೆ. ಇದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಲೇವಡಿ ಮಾಡಿದರು.
 
ನೋಟ್ ಬ್ಯಾನ್ ಸಮರ್ಥಿಸಿಕೊಂಡ ಅವರು ಜಿಎಸ್‌ಟಿ ಜಾರಿಯಿಂದಾಗಿ ಹಲವಾರು ಅವ್ಯವಹಾರಗಳನ್ನು ತಡೆಯಲು ಸಾಧ್ಯವಾಗಿದೆ. ಕಪ್ಪು ಕುಳಗಳಿಗೆ ಸರಕಾರದ ಕ್ರಮದಿಂದ ನಿದ್ದೆ ಬಾರದಂತಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆರೆಸ್ಸೆಸ್ ಸಂಘಟನೆ ಗೋಡ್ಸೆ ಸಂತಾನ: ಸಚಿವ ವಿನಯ್ ಕುಲಕರ್ಣಿ