Publish Date: Wed, 04 Oct 2017 (15:49 IST)
Updated Date: Wed, 04 Oct 2017 (15:51 IST)
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಣ, ಅಧಿಕಾರದ ಮದ ಹೆಚ್ಚಾಗಿದೆ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಂದಿನ ಬಾರಿಯೂ ಸಿಎಂ ನಾನೇ ಎನ್ನುತ್ತಿದ್ದಾರೆ. ಆದರೆ, ಜನತೆ ಅವರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕುರಬರಿಗೆ ಮತಹಾಕಬೇಡ ಎನ್ನಲು ಸಿಎಂ ಸಿದ್ದರಾಮಯ್ಯನವರಿಗೆ ಏನು ಹಕ್ಕಿದೆ. ಯಾರಿಗೆ ಮತಹಾಕಬೇಕು ಎನ್ನುವ ಬಗ್ಗೆ ಕುರುಬ ಜನಾಂಗ ಜ್ಞಾನ ಹೊಂದಿದೆ. ಇವರ ಹೇಳಿಕೆಗಳಿಗೆಲ್ಲಾ ಯಾರು ಮಣೆ ಹಾಕೋಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಎರಡೂ ಪಕ್ಷಗಳು ರೈತ ವಿರೋಧಿ ಮತ್ತು ಜನವಿರೋಧಿಯಾಗಿವೆ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.