Publish Date: Wed, 04 Oct 2017 (18:40 IST)
Updated Date: Wed, 04 Oct 2017 (18:43 IST)
ದೇಶಭಕ್ತ ಎಂದು ಬಿಂಬಿಸಿಕೊಳ್ಳುವ ಆರೆಸ್ಸೆಸ್ ಸಂಘಟನೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ಗೋಡ್ಸೆ ಸಂತಾನವಾಗಿದೆ ಎಂದು ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಸಂಘಟನೆ ಲಿಂಗಾಯುತ ಯುವಕರನ್ನು ಬಳಸಿಕೊಂಡು ಹಲವಾರು ಕಾರ್ಯಗಳನ್ನು ಮಾಡಿದೆ. ಲಿಂಗಾಯುತರಿಗೆ ಸ್ವಾಭಿಮಾನವಿದ್ದಲ್ಲಿ ಆರೆಸ್ಸೆಸ್ ಬಿಟ್ಟು ಹೊರಬರಬೇಕು ಎಂದು ಕರೆನೀಡಿದರು.
ವೀರಶೈವರು ಮತ್ತು ಲಿಂಗಾಯುತರು ಸಹೋದರರಿದ್ದಂತೆ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ. ಬೇರೆಯವರು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಗುಡುಗಿದರು.
ಆರೆಸ್ಸೆಸ್ ಸಂಘಟನೆಯ ಮುಖಂಡರು ಲಿಂಗಾಯುತ ಪ್ರತ್ಯೇಕ ಧರ್ಮ ಕುರಿತ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಚಿವ ವಿನಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.