Select Your Language

Notifications

webdunia
webdunia
webdunia
webdunia

ಮೋದಿಗೆ ದೇವರಲ್ಲಿ ನಂಬಿಕೆಯಿದ್ದರೆ ಮನೆಯಲ್ಲಿ ಧ್ಯಾನ ಮಾಡಲಿ: ಮಲ್ಲಿಕಾರ್ಜುನ ಖರ್ಗೆ ಟೀಕೆ

Mallikarjuna Kharge

sampriya

ನವದೆಹಲಿ , ಶುಕ್ರವಾರ, 31 ಮೇ 2024 (15:04 IST)
ನವದೆಹಲಿ: ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸದೆ, ಪ್ರತ್ಯೇಕವಾಗಿ ಇಡಬೇಕು. ಒಂದು ಧರ್ಮದ ವ್ಯಕ್ತಿ ನಿಮ್ಮೊಂದಿಗೆ ಇರಬಹುದು ಮತ್ತು ಇನ್ನೊಂದು ಧರ್ಮದ ವ್ಯಕ್ತಿ ನಿಮ್ಮ ವಿರುದ್ಧ ಇರಬಹುದು. ಚುನಾವಣೆಯೊಂದಿಗೆ ಧಾರ್ಮಿಕ ಭಾವನೆಗಳನ್ನು ಜೋಡಿಸುವುದು ತಪ್ಪು ಎಂದು ಮೋದಿ ವಿರುದ್ಧ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದರು.

ಲೋಕಸಭೆ ಚುನಾವಣೆ ಪ್ರಚಾರದ ನಂತರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್‌ ಸ್ಮಾರಕದಲ್ಲಿ ಧ್ಯಾನ ಮಾಡುತ್ತಿರುವ ಪ್ರಧಾನಿ ಮೋದಿ ಅವರನ್ನು ಟೀಕಿಸಿದರು.

ಮೋದಿ ಅವರಿಗೆ ದೇವರ ಮೇಲೆ ನಂಬಿಕೆಯಿದ್ದರೆ ಆ ಭಕ್ತಿಯನ್ನು ಮನೆಯಲ್ಲಿ ತೋರಿಸಲಿ.  ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ತರಬಾರದು ಎಂದರು.

ಇನ್ನೂ ಮೋದಿ ಅವರು ಕನ್ಯಾಕುಮಾರಿಯಲ್ಲಿ ಧ್ಯಾನದಲ್ಲಿ ತೊಡಗಿರುವ ಹಿನ್ನೆಲೆ ಪೋಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಎಷ್ಟು ಹಣ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರು ಆಧ್ಯಾತ್ಮಿಕ ಪ್ರವಾಸದ ಹಿನ್ನೆಲೆ ಕನ್ಯಾಕುಮಾರಿಯಲ್ಲಿರುವ  ಪೂಜ್ಯ ಹಿಂದೂ ತತ್ವಜ್ಞಾನಿ ಸ್ವಾಮಿ ವಿವೇಕಾನಂದರ ರಾಕ್‌ ಸ್ಮಾರಕದಲ್ಲಿ  ಧ್ಯಾನ ಮಂಟಪದಲ್ಲಿ ಅವರು ಧ್ಯಾನ ಮಾಡುತ್ತಿದ್ದಾರೆ. ಜೂನ್ 1ರವರೆಗೆ ಅವರು ತಮ್ಮ ಧ್ಯಾನವನ್ನು ಮುಂದುವರಿಸಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಗ ಪ್ರಜ್ವಲ್‌ ಲಾಕ್‌ ಆಗಿ ಆಯ್ತು, ಈಗ ಅಮ್ಮ ಭವಾನಿಗೂ ಕಾದಿದೆ ಆಪತ್ತು