Select Your Language

Notifications

webdunia
webdunia
webdunia
webdunia

ಕ್ಯಾಮರಾ ಇಲ್ಲದೇ ಏನೂ ಮಾಡಲ್ಲ ಎಂದು ಮೋದಿಗೆ ಟಾಂಗ್ ಕೊಟ್ಟ ವ್ಯಕ್ತಿಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ

PM Modi-Pratap Simha

Krishnaveni K

ಬೆಂಗಳೂರು , ಶುಕ್ರವಾರ, 31 ಮೇ 2024 (14:01 IST)
ಬೆಂಗಳೂರು: ಪ್ರಧಾನಿ ಮೋದಿ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ಕೂತಿರುವುದನ್ನು ಲೇವಡಿ ಮಾಡಿದ ಮುಸ್ಲಿಂ ವ್ಯಕ್ತಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ.

ಕನ್ಯಾಕುಮಾರಿಯಲ್ಲಿ ಖಾವಿ ಬಟ್ಟೆ ಧರಿಸಿ ಮೋದಿ ಧ್ಯಾನಕ್ಕೆ ಕೂತಿರುವ ಕ್ಷಣಗಳ ಫೋಟೋಗಳನ್ನು ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು. ಜೊತೆಗೆ ಭಾರತದ Son-Rise ಎಂದೂ ಬರೆದುಕೊಂಡಿದ್ದರು.

ಇದಕ್ಕೆ ಮೊಹಮ್ಮದ್ ರಫೀಕ್ ಎಂಬ ಬಳಕೆದಾರ ‘ಈ ಮನುಷ್ಯ ಕ್ಯಾಮರ ಇಲ್ಲದೇ ಯಾವ ಕಾರ್ಯನು ಮಾಡಲ್ಲ. ದೇಶದ ಅತ್ಯಂತ ನೌಟಂಕಿ ಮಾಡೋ ಸೇವಕ ಅಂದರೆ ಇವರೇ’ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

‘ಮೊಹಮ್ಮದ್ ರಫೀಕ್ ಅವರೇ ನೀವು ಲೌಡ್ ಸ್ಪೀಕರ್ ಇಲ್ಲದೆ ದಿನಕ್ಕೆ 5 ಸಲ ಕಿರುಚಿಕೊಳ್ಳಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ. ಇನ್ನೂ ಕೆಲವರೂ ಈ ಫೋಟೋಗೆ ಕಾಮೆಂಟ್ ಮಾಡಿದ್ದು, ಫೋಟೋಗ್ರಾಫರ್ ಕೈ ಚಳಕಕ್ಕೆ ಅಭಿನಂದಿಸಬೇಕು ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ಮೋದಿ ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುತ್ತಿರುವ ದಿಗ್ಗಜ ನಾಯಕ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂಗೆ ದೊಡ್ಡ ರೋಗ ಬಂದಿರೋ ಹಾಗಿದೆ, ಜೈಲಿಗೆ ಹೋಗ್ಬರ್ತೀನಿ, ದೆಹಲಿ ಬಗ್ಗೆ ಹುಷಾರು: ಅರವಿಂದ್ ಕೇಜ್ರಿವಾಲ್