Select Your Language

Notifications

webdunia
webdunia
webdunia
webdunia

ಹೆರಿಗೆ ರಜೆ ತ್ಯಜಿಸಿ ಮಗು ಜತೆ ಕಚೇರಿಗೆ ಬಂದ ಐಎಎಸ್ ಅಧಿಕಾರಿ

ಐಐಎಸ್ ಆಫೀಸರ್
ಲಕ್ನೋ , ಮಂಗಳವಾರ, 13 ಅಕ್ಟೋಬರ್ 2020 (11:51 IST)
ಲಕ್ನೋ: ಕರ್ತವ್ಯವೇ ದೇವರು ಎಂದು ನಂಬಿರುವ ಎಷ್ಟೋ ಪ್ರಾಮಾಣಿಕ ಅಧಿಕಾರಿಗಳೂ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಇದು ಉದಾಹರಣೆ. ಉತ್ತರಪ್ರದೇಶದಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಹೆರಿಗೆ ರಜೆ ತ್ಯಜಿಸಿ ಮಗು ಜತೆಗೆ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸುದ್ದಿಯಾಗಿದ್ದಾರೆ.


ಒಂದು ಕೈಯಲ್ಲಿ ಮಗು, ಇನ್ನೊಂದು ಕೈಯಲ್ಲಿ ಕಡತಗಳಿಗೆ ಸಹಿ ಹಾಕುತ್ತಿರುವ ಅಧಿಕಾರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೌಮ್ಯ ಪಾಂಡೆ ಎಂಬ ಅಧಿಕಾರಿ ಹೆರಿಗೆಯಾಗಿ ಮೂರೇ ವಾರಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಈಕೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆ ನಗು ನಗುತ್ತಲೇ ಕಡತಗಳನ್ನು ಪರಿಶೀಲಿಸಿ ಸಹಿ ಹಾಕುತ್ತಿದ್ದರೆ, ಆಕೆಯ ಕೈಯಲ್ಲಿರುವ ಮಗು ಆರಾಮವಾಗಿ ತಾಯಿಯ ತೋಳಿನಲ್ಲಿ ಮಲಗಿ ನಿದ್ರಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪನ್ಯಾಸಕರಿಗೆ ಸರಕಾರದಿಂದ ಗುಡ್ ನ್ಯೂಸ್