Publish Date: Mon, 30 Jan 2023 (15:01 IST)
Updated Date: Mon, 30 Jan 2023 (18:02 IST)
ನವದೆಹಲಿ : ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುವುದಕ್ಕಿಂತ ನಾನು ಸಾಯುತ್ತೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳುವ ಮೂಲಕ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಸಾಯುವವರೆಗೆ ಬಿಜೆಪಿ ಸೇರಲ್ಲ. ನನ್ನ ಸಾವನ್ನು ಬೇಕಿದ್ರೆ ಸ್ವೀಕರಿಸುತ್ತೇನೆ ಆದರೆ ಬಿಜೆಪಿ ಪಕ್ಷ ಮಾತ್ರ ಸೇರ್ಪಡೆಯಾಗಲ್ಲ. ನನಗೆ ಮುಖ್ಯಮಂತ್ರಿಯಾಗಲು ಇಷ್ಟವಿರಲಿಲ್ಲ. ಆದರೆ ಬಿಜೆಪಿಯವರು ನನ್ನನ್ನು ಒತ್ತಾಯಪೂರ್ವಕವಾಗಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಚುನಾವಣೆ ನಡೆಯಲಿ, ಆಗ ಯಾರಿಗೆ ಎಷ್ಟು ಸೀಟು ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು.