Select Your Language

Notifications

webdunia
webdunia
webdunia
webdunia

ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ : ಸಿದ್ದರಾಮಯ್ಯ

webdunia
ರಾಮನಗರ , ಸೋಮವಾರ, 30 ಜನವರಿ 2023 (11:31 IST)
ರಾಮನಗರ : ಜೆಡಿಎಸ್ ಪಕ್ಷ ಅಧಿಕಾರಕ್ಕೋಸ್ಕರ ಬಿಜೆಪಿ ಜೊತೆ ಹೋಗುತ್ತದೆ. ಜೆಡಿಎಸ್ಗೆ ಸಿದ್ಧಾಂತ, ವೈಚಾರಿಕತೆ ಇಲ್ಲ. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗ್ತಾರೆ.

ನನ್ನನ್ನು ರಾಷ್ಟ್ರಪತಿ, ಪಿಎಂ ಮಾಡ್ತಿನಿ ಅಂದ್ರೂ ನನ್ನ ಹೆಣವೂ ಕೂಡಾ ಬಿಜೆಪಿಗೆ ಹಾಗೂ ಆರ್ಎಸ್ಎಸ್ ಜೊತೆ ಹೋಗಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಾಗಡಿಯ ಶಾದಿಮಹಲ್ ಉದ್ಘಾಟನೆ ಮಾಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವ್ರು ನನ್ನನ್ನು ಹಿಂದೂ ವಿರೋಧಿ ಅಂತ ಬಿಂಬಿಸ್ತಾರೆ. ಆ ಬಿಜೆಪಿಯ ಸಿ.ಟಿ.ರವಿ ನನ್ನ ಸಿದ್ದರಾಮುಲ್ಲಾ ಖಾನ್ ಅಂತಾನೆ.

 ಆದರೆ ಗಾಂಧೀಜಿ ಅಪ್ಪಟ ಹಿಂದೂ ಅಲ್ವ. ಅಂತವರನ್ನ ಕೊಂದ ಗೂಡ್ಸೆಯನ್ನ ಪೂಜಿಸುವವರು ಇವ್ರು ಹಿಂದೂನಾ. ಇವರಿಗೆ ಮರ್ಯಾದೆ ಇದ್ಯಾ? ಇಂತವರ ಜೊತೆ ಸೇರಿಕೊಂಡಿರುವ ಜೆಡಿಎಸ್ನವರಿಗೆ ಮಾನ, ಮರ್ಯಾದೆ ಇದ್ಯಾ ಎಂದು ಪ್ರಶ್ನಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಾಯುಸೇನಾ ವಿಮಾನಗಳು ಪತನ !