ಹೈದರಾಬಾದ್‌: ತಪ್ಪಾದ ಇಂಜೆಕ್ಷನ್‌ಗೆ ಕೋಮಾಕ್ಕೆ ಜಾರಿದ ಮಹಿಳೆ

Sampriya
ಮಂಗಳವಾರ, 2 ಡಿಸೆಂಬರ್ 2025 (18:08 IST)
Photo Credit X
ಹೈದರಾಬಾದ್: ಖಾಸಗಿ ಕ್ಲಿನಿಕ್‌ನ ವೈದ್ಯರು ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ ಮಹಿಳೆಯೊಬ್ಬರು ಕೋಮಾಕ್ಕೆ ಜಾರಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಫಿಲಂನಗರ ಪೊಲೀಸ್ ಠಾಣೆ ವ್ಯಾಪ್ತಿಯ ಓಯು ಕಾಲೋನಿಯಲ್ಲಿರುವ ಕ್ಲಿನಿಕ್ ನಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ ಮಹಿಳೆಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಡಾ.ಮರಿಯಮ್ ಸೈಯದ್ ಹಫೀಜ್ ಎಂದು ಗುರುತಿಸಲಾಗಿರುವ ಸಂತ್ರಸ್ತೆ ನವೆಂಬರ್ 22 ರಂದು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಕ್ಲಿನಿಕ್‌ಗೆ ಭೇಟಿ ನೀಡಿದ್ದರು.

ಆಕೆಯ ಸಹೋದರ ನೀಡಿದ ದೂರಿನ ಪ್ರಕಾರ, ಮಹಿಳೆಗೆ ಅಮೋಕ್ಸಿಸಿಲಿನ್ ಮತ್ತು ಪೆನ್ಸಿಲಿನ್ ಎಂಬ ಪ್ರತಿಜೀವಕಗಳ ಗುಂಪಿನಿಂದ ಅಲರ್ಜಿ ಇದೆ ಎಂದು ತಿಳಿಸಿದ್ದರೂ ಆರೋಪಿ ವೈದ್ಯರು ಮೊನೊಸೆಫ್ ಚುಚ್ಚುಮದ್ದನ್ನು ನೀಡಿದ್ದಾರೆ. ಬಳಿಕ ಸಂತ್ರಸ್ತೆಗೆ ಕೆಲ ರೋಗಲಕ್ಷಣಗಳು ಕಾಣಿಸಿಕೊಂಡಿದೆ. 

ರೋಗಲಕ್ಷಣಗಳನ್ನು ಗಮನಿಸಿದ ನಂತರ, ಆರೋಪಿ ವೈದ್ಯರು ಮತ್ತೊಂದು ಚುಚ್ಚುಮದ್ದನ್ನು ನೀಡಿದರು ಎಂದು ವರದಿಯಾಗಿದೆ, ಅದರ ನಂತರ ಹೃದಯ ಸ್ತಂಭನದಿಂದಾಗಿ ಮರಿಯಮ್ ಕುಸಿದು ಬಿದ್ದಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚು ಸಮಯ ವಾಹನ ನಿಲ್ಲಿಸುವವರಿಗೆ ಬೀಳುತ್ತೆ ಜೇಬಿಗೆ ಕತ್ತರಿ

ಪಾಕಿಸ್ತಾನದ ಅವಸ್ಥೆಯೇ... ಶ್ರೀಲಂಕಾಗೆ ಅವಧಿ ಮೀರಿದ ಆಹಾರ ಸಾಮಗ್ರಿ ಕಳುಹಿಸಿದ ಪಾಕ್

ಹಿಟ್ಟು ಬೀಸಲೆಂದು ಗಿರಣಿಗೆ ತೆರಳಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್

ಸಿದ್ದರಾಮಯ್ಯ, ಶಿವಕುಮಾರ್ ಬ್ರೇಕ್‌ಫಾಸ್ಟ್‌ ಮೀಟಿಂಗ್ ಕಥೆ ಬಿಚ್ಚಿಟ್ಟ ಜೆಡಿಎಸ್

ಪೋಕ್ಸೋ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಬಿಗ್ ರಿಲೀಫ್‌

ಮುಂದಿನ ಸುದ್ದಿ
Show comments