Select Your Language

Notifications

webdunia
webdunia
webdunia
webdunia

ಇನ್ಶೂರೆನ್ಸ್ ಹಣಕ್ಕಾಗಿ ಪತ್ನಿಯ ಕೊಂದ ಪತಿ

ಇನ್ಶೂರೆನ್ಸ್ ಹಣಕ್ಕಾಗಿ ಪತ್ನಿಯ ಕೊಂದ ಪತಿ
ಇಂಧೋರ್ , ಸೋಮವಾರ, 8 ಆಗಸ್ಟ್ 2022 (09:30 IST)
ಇಂಧೋರ್: ಪತ್ನಿಯ ಹೆಸರಿನಲ್ಲಿದ್ದ ಇನ್ಶೂರೆನ್ಸ್ ಹಣ ಪಡೆಯಲು ಪತಿಯೇ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ.

ಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಮಾರ್ಗಗಳು ಯಾವುದು ಇದೆ ಎಂದು ಇಂಟರ್ನೆಟ್ ನಲ್ಲಿ ತಡಕಾಡಿದ್ದ. ಇದೇ ರೀತಿ ವಿಡಿಯೋದಿಂದ ಪ್ರಭಾವಿತನಾಗಿ ಪತ್ನಿಯ ಹೆಸರಿಗೆ ಮೊದಲು ಇನ್ಶೂರೆನ್ಸ್ ಮಾಡಿಸಿದ್ದ. ಬಳಿಕ ಆಕೆಯನ್ನೇ ಕೊಲೆ ಮಾಡಿ ಇನ್ಶೂರೆನ್ಸ್ ಹಣ ಪಡೆಯಲು ಯೋಜನೆ ಹಾಕಿದ್ದ.

ಅದರಂತೆ ನಡು ರಸ್ತೆಯಲ್ಲಿ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿ ತಾನೇ ಪೊಲೀಸ್ ಠಾಣೆಗೆ ತೆರಳಿ ನಾಲ್ವರು ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಪತಿಯ ನಾಟಕ ಬಯಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನು ಕೊಲ್ಲಲು 1 ಲಕ್ಷ ಸುಪಾರಿ ಕೊಟ್ಟಿದ್ದ ತಂದೆ ಅರೆಸ್ಟ್