Publish Date: Mon, 08 Aug 2022 (09:20 IST)
Updated Date: Mon, 08 Aug 2022 (09:37 IST)
ಲಕ್ನೋ: ಪ್ರೀತಿ ಪ್ರೇಮದ ಹಿಂದೆ ಬಿದ್ದಿದ್ದ ಮಗಳನ್ನು ಕೊಲೆ ಮಾಡಲು ತಂದೆಯೇ 1 ಲಕ್ಷ ರೂ. ಗಳ ಸುಪಾರಿ ಕೊಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಸಂಬಂಧ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಮಗಳನ್ನು ಸಾಯಿಸಲೆಂದೇ ಆಸ್ಪತ್ರೆಗೆ ದಾಖಲಿಸಿದ್ದ ತಂದೆ ವಾರ್ಡ್ ಬಾಯ್ ಮತ್ತು ಮತ್ತೋರ್ವ ಸಹಾಯಕಿಗೆ ಹಣ ನೀಡಿ ಓವರ್ ಡೋಸ್ ಇಂಜೆಕ್ಷನ್ ನೀಡಲು ತಿಳಿಸಿದ್ದ. ಅದರಂತೆ ಆರೋಪಿಗಳು ಮಾಡಿದ್ದರಿಂದ ಬಾಲಕಿಯ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ಅನುಮಾನಗೊಂಡ ವೈದ್ಯರು ಸಿಸಿಟಿವಿ ಪರಿಶೀಲಿಸಿದಾಗ ಕೃತ್ಯ ಬಯಲಿಗೆ ಬಂದಿತ್ತು. ಅದರಂತೆ ಪೊಲೀಸರಿಗೆ ದೂರು ನೀಡಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಗಳಿಗೆ ಲವ್ವರ್ ನಿಂದ ದೂರವಿರುವಂತೆ ತಂದೆ ಎಷ್ಟೇ ಬುದ್ಧಿವಾದ ಹೇಳಿದರೂ ಆಕೆ ಕೇಳಿರಲಿಲ್ಲ. ಈ ಕಾರಣಕ್ಕೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.