Publish Date: Tue, 03 May 2022 (07:30 IST)
Updated Date: Tue, 03 May 2022 (07:36 IST)
ಪಾಟ್ನಾ: ಗಂಡ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪದಲ್ಲಿ ಜೈಲಲ್ಲಿ ಕಾಲ ಕಳೆಯುತ್ತಿದ್ದ. ಆದರೆ ನಿಜವಾಗಿ ಜೀವಂತವಾಗಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಮೋಜು ಮಾಡುತ್ತಿದ್ದಳು!
ಇಂತಹ ವಿಚಿತ್ರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. 2016 ರಲ್ಲಿ ಮಹಿಳೆ ಮನೆಯಿಂದ ನಾಪತ್ತೆಯಾಗಿದ್ದಳು. ಆಕೆಯನ್ನು ವರದಕ್ಷಿಣೆ ಕಿರುಕುಳ ನೀಡಿ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆಕೆಯ ಪೋಷಕರು ಪೊಲೀಸರಿಗೆದೂರು ನೀಡಿದ್ದರು. ಅದರಂತೆ ಪತಿಯನ್ನು ಪೊಲೀಸರು ಬಂಧಿಸಿದ್ದರು.
ಆದರೆ ಈ ಪ್ರಕರಣದ ಬಗ್ಗೆ ಅನುಮಾನ ಹೊಂದಿದ್ದ ಮಹಿಳೆಯ ಮೊಬೈಲ್ ಟ್ರೇಸ್ ಮಾಡಿದ್ದರು. ಇತ್ತೀಚೆಗೆ ಮಹಿಳೆ ಸತ್ತಿಲ್ಲ. ಪಂಜಾಬ್ ನಲ್ಲಿ ತನ್ನ ಪ್ರಿಯಕರನ ಜೊತೆ ಆರಾಮವಾಗಿದ್ದಾಳೆ ಎಂದು ಪೊಲೀಸರಿಗೆ ಗೊತ್ತಾಗಿದೆ. ತಕ್ಷಣವೇ ಆಕೆಯನ್ನು ಕರೆಸಿಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ.