Publish Date: Mon, 02 May 2022 (09:40 IST)
Updated Date: Mon, 02 May 2022 (09:43 IST)
ನವದೆಹಲಿ: ಅಂಗಡಿಯೊಂದರ ಹೊರಗೆ ಇರಿಸಲಾಗಿದ್ದ ನಾಲ್ಕು ಲೀಟರ್ ಹಾಲು ಕಳ್ಳತನ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಅಂಗಡಿಯ ಹೊರಗೆ ಇರಿಸಲಾಗಿದ್ದ ನಾಲ್ಕು ಲೀಟರ್ ಹಾಲನ್ನು 24 ವರ್ಷದ ಯುವಕ ಕದ್ದಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ.
ಆದರೆ ಆತನನ್ನು ಹಿಡಿಯಲಾಯಿತು. ಬಳಿಕ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಬಂಧಿಸಿ ಎಫ್ ಐಆರ್ ದಾಖಲಿಸಲಾಗಿದೆ.