Publish Date: Sat, 27 Mar 2021 (10:49 IST)
Updated Date: Sat, 27 Mar 2021 (10:51 IST)
ಮಧ್ಯಪ್ರದೇಶ: ಕ್ಷುಲ್ಲುಕ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿದ ಪಾಪಿ ಪತಿ ಬಳಿಕ ಆಕೆಯ ಕೈ ಬೆರಳನ್ನು ಕಟ್ ಮಾಡಿ ವಿಕೃತಿ ಮೆರೆದ ಘಟನೆ ನಡೆದಿದೆ.
ಈ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಇಬ್ಬರ ನಡುವೆ ಕ್ಷುಲ್ಲುಕ ವಿಚಾರಕ್ಕಾಗಿ ಕಲವಾಹಿತ್ತು. ಇದೇ ಸಿಟ್ಟಿನಲ್ಲಿ ರಾತ್ರಿ ಪತ್ನಿ ನಿದ್ರೆಯಲ್ಲಿದ್ದಾಗ ಪತಿ ಮಚ್ಚಿನಿಂದ ಆಕೆಯ ಕೈ ಬೆರಳುಗಳನ್ನು ಕತ್ತರಿಸಿದ್ದಾನೆ.
ಇದರಿಂದಾಗಿ ಆಕೆಯ ಒಂದು ಕೈನ ಹೆಬ್ಬೆರಳು ಮತ್ತು ಇನ್ನೊಂದು ಕೈಯ ಮೂರು ಬೆರಳುಗಳು ತುಂಡಾಗಿವೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಭಾರೀ ವೈರಲ್ ಆಗಿದ್ದು, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡಾ ಪ್ರತಿಕ್ರಿಯಿಸಿದ್ದಾರೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ತಕ್ಕ ಕಾನೂನು ಹೊರತರುವುದಾಗಿ ಭರವಸೆ ನೀಡಿದ್ದಾರೆ.