Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ ಗಲಭೆ: ವಾಸಿಂ ಪಠಾಣ್‌ ಗೆ ನ್ಯಾಯಾಂಗ ಬಂಧನ

hubli voilence wasim pattan
bengaluru , ಬುಧವಾರ, 27 ಏಪ್ರಿಲ್ 2022 (17:30 IST)
ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಮೌಲ್ವಿ ವಾಸಿಂ ಪಠಾಣ್‌ ಗೆ ಏಪ್ರಿಲ್‌ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಾಸಿಂ ಪಠಾಣ್‌ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದ ಪೊಲೀಸರು ಪೊಲೀಸ್‌ ಕಸ್ಟಡಿಗೆ ಪಡೆದಿದ್ದರು. 5 ದಿನಗಳ ಪೊಲೀಸ್‌ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ 4ನೇ ಜೆಎಂಸಿಸಿ ನ್ಯಾಯಾಲಯ ವಾಸಿಂ ಪಠಾಣ್‌ ಅವರಿಗೆ ಏಪ್ರಿಲ್‌ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಾಸಿಂ ಪಠಾಣ್‌ ಪೊಲೀಸ್‌ ವಾಹನದ ಮೇಲೆ ನಿಂತು ಗಲಭೆಗೆ ಪ್ರಚೋದನೆ ನೀಡಿದರು ಎಂಬ ಆರೋಪ ಕೇಳಿ ಬಂದಿದೆ. ಆದರೆ ವಾಸಿಂ ಪಠಾಣ್‌ ಜನ ಸೇರಿಸಿದ್ದು ನಾನೇ. ಆದರೆ ನಾನು ಶಾಂತಿ ಕಾಪಾಡಲು ವಾಹನ ಮೇಲೆ ನಿಂತಿದ್ದೆ. ಆದರೆ ಪರಿಸ್ಥಿತಿ ಕೈಮೇರಿ ಗಲಭೆ ನಡೆಯಿತು ಎಂದು ಹೇಳಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್-ಕಾಂಗ್ರೆಸ್‌ ಅಣ್ತಮ್ಮ ಇದ್ದಂತೆ: ಆರ್.ಅಶೋಕ್‌ ಟಾಂಗ್