Select Your Language

Notifications

webdunia
webdunia
webdunia
webdunia

ಜೆಡಿಎಸ್-ಕಾಂಗ್ರೆಸ್‌ ಅಣ್ತಮ್ಮ ಇದ್ದಂತೆ: ಆರ್.ಅಶೋಕ್‌ ಟಾಂಗ್

r.ashok hassan congress jds ಜೆಡಿಎಸ್‌ ಕಾಂಗ್ರೆಸ್‌ ಅಶೋಕ್‌ ಹಾಸನ
bengaluru , ಬುಧವಾರ, 27 ಏಪ್ರಿಲ್ 2022 (17:28 IST)
ಜೆಡಿಎಸ್ ಬಿಜೆಪಿಯ ಬಿ ಟೀಂ. ಎರಡೂ ಪಕ್ಷಗಳು ಅಣ್ತಮ್ಮ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯ ನಂತರ ಅಧಿಕಾರದ ಆಸೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು, 2019ರ ಲೋಕಸಭೆ ಚುನಾವಣೆ ವೇಳೆ ಇದು ಮುಂದುವರೆದಿತ್ತು. ಧರ್ಮ ಸಿಂಗ್ ಸರ್ಕಾರ ವಿದ್ದಾಗ ನೀವು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರಿ, ನಮ್ಮ ಜೊತೆ ಒಂದೇ ಒಂದು ಸಲ ಮೈತ್ರಿ ಮಾಡಿಕೊಂಡಿದ್ದು ಮಿಕ್ಕೆಲ್ಲಾ ಕಾಂಗ್ರೆಸ್‌ ಜೊತೆಗೆ ಜೆಡಿಎಸ್ ಹೆಚ್ಚಾಗಿ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದರು.
ದೇವೇಗೌಡರು ಪ್ರಧಾನಿಯಾಗುವ ಸಮಯದಲ್ಲಿ ಕಾಂಗ್ರೆಸ್‌ ನೊಂದಿಗೆ ಮೈತ್ರಿಯಾಗಿತ್ತು. ಇಂದಿಗೂ ಸಹ ದೇವೇಗೌಡರಿಗೆ ಕಾಂಗ್ರೆಸ್ ಪರವಾಗಿ ಒಲವಿದೆ. ಬಿಜೆಪಿಗೆ ʻಎʼ ಟೀಂ ʻಬಿʼ ಟೀಂನ ಅವಶ್ಯಕತೆಯಿಲ್ಲ ನಾವು ಯಾರ ಮಾತನ್ನು ಸಹ ಕೇಳುವುದಿಲ್ಲ ನಮ್ಮ ಸರ್ಕಾರ ಎನಿದ್ದರು ಅಭಿವೃದ್ದಿ ಪರವಾದ ನಿಲುವನ್ನು ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದ್ವೇಷ ರಾಜಕಾರಣ ನಿಲ್ಲಿಸಿ : ಪ್ರಧಾನಿಗೆ 100 ಮಾಜಿ ಉನ್ನತ ಅಧಿಕಾರಿಗಳ ಪತ್ರ!