ಕೊರೊನಾ ವೈರಸ್ ಲಾಕ್ಡೌನ್ನಿಂದ ಹಲವರು ವರ್ಕ್ ಫ್ರಮ್ ಹೋಂ ಮಾಡುತ್ತಿದ್ದಾರೆ. ಇದರಿಂದ, ಆನ್ಲೈನ್ ಆಹಾರ ಪ್ಲಾಟ್ಫಾರ್ಮ್ಗಳ ವಹಿವಾಟು ಹೆಚ್ಚಾಗುತ್ತಿದೆ.
ಈಗ ಕೇಂದ್ರ ಸರ್ಕಾರ, ಜಿಎಸ್ಟಿ ನೀತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಇದರಿಂದ ರೆಸ್ಟೋರೆಂಟ್ಗಳು ಮತ್ತು ಆಹಾರ ವಿತರಣಾ ಅಪ್ಲಿಕೇಶನ್ಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಇದರಿಂದ ಗ್ರಾಹಕರ ಮೇಲೂ ಪರಿಣಾಮ ಬೀರುತ್ತದಾ ಎನ್ನುವ ಅನುಮಾನಗಳೂ ಕಾಡುತ್ತಿದೆಯಾ..? ಹಾಗಾದ್ರೆ, ಮುಂದೆ .. ಮುಂದಿನ ವರ್ಷದ ಜನವರಿ 1 ರಿಂದ, ಆಹಾರ ವಿತರಣಾ ಅಪ್ಲಿಕೇಶನ್ಗಳು ಪ್ಲಾಟ್ಫಾರ್ಮ್ಗಳಿಂದ ಮಾಡಿದ ವಿತರಣೆಗಾಗಿ ರೆಸ್ಟೋರೆಂಟ್ಗಳ ಬದಲಿಗೆ 5% ಜಿಎಸ್ಟಿ ಸಂಗ್ರಹಿಸಿ ಸರ್ಕಾರಕ್ಕೆ ಠೇವಣಿ ಇಡಬೇಕಾಗುತ್ತದೆ. ಶುಕ್ರವಾರದ ಜಿಎಸ್ಟಿ ಕೌನ್ಸಿಲ್ ಅನುಮೋದಿಸಿದ ಈ ಜವಾಬ್ದಾರಿಯ ವರ್ಗಾವಣೆಯನ್ನು ತೆರಿಗೆ ಪಾವತಿಸದ ಹಲವಾರು ರೆಸ್ಟೋರೆಂಟ್ಗಳನ್ನು ಜಿಎಸ್ಟಿ ನೆಟ್ ಅಡಿಯಲ್ಲಿ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದನ್ನು ಪ್ರಸ್ತಾಪಿಸಿತ್ತು. ಈ ಬಗ್ಗೆ ಜಿಎಸ್ಟಿ ಕೌನ್ಸಿಲ್ ಸಭೆಯ ನಂತರ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.