Webdunia - Bharat's app for daily news and videos

Install App

ಗಣೇಶ ವಿಸರ್ಜನೆ ವೇಳೆ ಘೋರ ದುರಂತ !

Webdunia
ಸೋಮವಾರ, 20 ಸೆಪ್ಟಂಬರ್ 2021 (09:44 IST)
ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ಗಣೇಶ ವಿಸರ್ಜನೆಯ ದಿನದಂದು ಘೋರ ದುರಂತ ನಡೆದಿದ್ದು, ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 10 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
Photo Courtesy: Google

ಮಧ್ಯಪ್ರದೇಶದ ಭಿಂಡ್ ನಲ್ಲಿ ಗಣೇಶ ವಿಸರ್ಜನೆ ವೇಳೆ ಕೊಳದಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಮೃತ ಮಕ್ಕಳನ್ನು ಅಭಿಷೇಕ್ ಕುಶ್ವಾಹ, ಸಚಿನ್ ರಾಜಾವತ್, ಹರ್ಷಿತ್ ರಾಜಾವತ್, ಪ್ರಶಾಂತ್ ಕುಶ್ವಾಹ ಎಂದು ಗುರುತಿಸಲಾಗಿದೆ. ಎಲ್ಲರೂ 12-13 ವರ್ಷ ವಯಸ್ಸಿನವರಾಗಿದ್ದರು. ಸದ್ಯ ನಾಲ್ವರು ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. ಜೊತೆಗೆ ಮಧ್ಯಪ್ರದೇಶದ ಸಾತ್ನಾಳದಲ್ಲಿ 3 ಮಕ್ಕಳು ಸೇರಿದಂತೆ 4 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಾಜ್ ಘರ್ ನಲ್ಲಿ ಒಂದು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ವರದಿಯಾಗಿದೆ.
ಸಾತ್ನಾ ಜಿಲ್ಲೆಯಲ್ಲಿ, ಜುರಾ ಗ್ರಾಮದ ಕೊಳದಲ್ಲಿ ಮುಳುಗಿ 3 ಮಕ್ಕಳು ಸೇರಿದಂತೆ 4 ಜನರು ಸತ್ತಿದ್ದಾರೆ. ಮುಳುಗುತ್ತಿದ್ದ ಎಲ್ಲಾ ಮಕ್ಕಳು 8 ರಿಂದ 10 ವರ್ಷ ವಯಸ್ಸಿನವರಾಗಿದ್ದರು. ಘಟನೆ ವರದಿಯಾಗುತ್ತಿದ್ದಂತೆ ಶಾಸಕ ನಾರಾಯಣ್ ತ್ರಿಪಾಠಿ, ಎಸ್ ಡಿಒಪಿ ಹಿಮಾಲಿ ಸೋನಿ ಮತ್ತು ಎಸ್ ಡಿಎಂ ಧೀರೇಂದ್ರ ಮಿಶ್ರಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments