Select Your Language

Notifications

webdunia
webdunia
webdunia
webdunia

ಲಸಿಕೆಯ ಗ್ರಾಫ್ ಹಾಕಿ ಕೇಂದ್ರ ಸರ್ಕಾರವನ್ನ ಟೀಕಿಸಿದ ರಾಹುಲ್ ಗಾಂಧಿ..!

ಕೇಂದ್ರ ಸರ್ಕಾರ
ನವದೆಹಲಿ , ಸೋಮವಾರ, 20 ಸೆಪ್ಟಂಬರ್ 2021 (09:35 IST)
ನವದೆಹಲಿ : ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿ ದಾಖಲೆ ಬರೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಶುಕ್ರವಾರ ದೇಶಾದ್ಯಂತ ಕೋವಿಡ್ 19 ಲಸಿಕಾ ಬೃಹತ್ ಮೇಳವನ್ನು ಆಯೋಜಿಸಲಾಗಿತ್ತು. ಒಂದೇ ದಿನ 2 ಕೋಟಿ ಡೋಸ್ ಗಡಿ ದಾಟುವ ಮೂಲಕ ದೇಶ ಕೋವಿಡ್ 19 ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ.

ಈ ವಿಚಾರವನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. Vaccination ಹ್ಯಾಶ್ ಟ್ಯಾಗ್ ಬಳಸಿ ರಾಹುಲ್ ಗಾಂಧಿ ಟ್ವೀಟ್ನಲ್ಲಿ ಕಾರ್ಯಕ್ರಮ ಮುಗಿದಿದೆ ಎಂದು ಬರೆದಿದ್ದಾರೆ. ಚುಚ್ಚುಮದ್ದಿನ ಹಂಚಿಕೆಯ ಕುಸಿತವನ್ನು ತೋರಿಸಲು ಕೋವಿಡ್ ವೆಬ್ಸೈಟ್ನ ಮಾಹಿತಿಯ ಪ್ರಕಾರ ಕಳೆದ 10 ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡಿರುವ ಗ್ರಾಫನ್ನು ರಾಹುಲ್ ಗಾಂಧಿ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
2.1 ಕೋಟಿ ಲಸಿಕೆ ವಿತರಣೆಯಗುವುದನ್ನು ಹಲವು ದಿನಗಳವರೆಗೆ ಎದುರು ನೋಡುತ್ತಿದ್ದೇನೆ. ಈ ವೇಗ ನಮ್ಮ ದೇಶಕ್ಕೆ ಬೇಕಾಗಿದೆ ಎಂದು ಈ ಹಿಂದೆ ಟ್ವಿಟ್ಟರ್ನಲ್ಲಿ ಹೇಳಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಸಮಗ್ರ ಕ್ರಮ ಅಗತ್ಯ: ವೆಂಕಯ್ಯ ನಾಯ್ಡು