Select Your Language

Notifications

webdunia
webdunia
webdunia
webdunia

ಆಯುಷ್ಮಾನ್ ಮಿತ್ರರಾಗಿ 30000 ರೂ.ವರೆಗೆ ವೇತನ ಪಡೆಯಿರಿ: ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೀಗೆ ಮಾಡಿ

Ayushman Bharat

Krishnaveni K

ನವದೆಹಲಿ , ಗುರುವಾರ, 8 ಆಗಸ್ಟ್ 2024 (11:22 IST)
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪ್ರಿಯ ಯೋಜನೆಗಳಿಗೆ ಈಗ ಆಯುಷ್ಮಾನ್ ಮಿತ್ರ ಯೋಜನೆಯೂ ಸೇರ್ಪಡೆಯಾಗುತ್ತಿದೆ. ಈ ಯೋಜನೆಯಡಿಯಲ್ಲಿ ಯುವಕರಿಗೆ ತಿಂಗಳಿಗೆ 15,000-30,000 ರೂ.ವರೆಗೆ ವೇತನ ಪಡೆಯಲು ಅವಕಾಶ ಸಿಗಲಿದೆ. ಈ ಯೋಜನೆಯ ವಿವರ ಇಲ್ಲಿದೆ.

ಈ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರದಿಂದ ಗೋಲ್ಡನ್ ಕಾರ್ಡ್ ಸಿಗುತ್ತದೆ. ಅದರಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಮಿತ್ರ ಎನ್ನುವ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಗೆ ಕನಿಷ್ಟ 15,000 ರೂ.ಗಳಿಂದ ಗರಿಷ್ಠ 30,000 ರೂ.ವರೆಗೆ ವೇತನವಿರಲಿದೆ.

ಸದ್ಯಕ್ಕೆ ಈ ಯೋಜನೆಯಡಿಯಲ್ಲಿ 1 ಲಕ್ಷ ಆಯುಷ್ಮಾನ್ ಮಿತ್ರರನ್ನು ನೇಮಕ ಮಾಡಲು ಮೋದಿ ಸರ್ಕಾರ ಯೋಜನೆ ಹಾಕಿಕೊಂಡಿದೆ. ಇಂಟರ್ ಮೀಡಿಯೇಟ್ ತೇರ್ಗಡೆಯಾದ ಯುವಕರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇದೇ ಯೋಜನೆಯಡಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಕೇಂದ್ರ ಸರ್ಕಾರದ್ದಾಗಿದೆ.

ಅರ್ಹತೆ ಏನು?
ಆಯುಷ್ಮಾನ್ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು 12 ನೇ ತರಗತಿ ಪಾಸಾಗಿರಬೇಕು. ನಿಮ್ಮ ವಯಸ್ಸು 18 ರಿಂದ 35 ರೊಳಗಾಗಿರಬೇಕು. ಸಾಮಾನ್ಯ ಕಂಪ್ಯೂಟರ್ ಜ್ಞಾನವಿರಬೇಕು. ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ, ಆಸ್ಪತ್ರೆಯ ನೀತಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಎಲ್ಲಿ?
https://pmjay.gov.in/ ಎಂಬ ವೆಬ್ ಸೈಟ್ ಗೆ ಹೋಗಿ ಮುಖಪುಟದಲ್ಲಿ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಂಡು ಕ್ಲಿಕ್ ಮಾಡಿ. ಬಳಿಕ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ ಅರ್ಜಿ ಬಟನ್ ಕ್ಲಿಕ್ ಮಾಡಿ. ನಂತರ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಮುಂದುವರಿಯಿರಿ. ನಿಮ್ಮ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ನ್ನು ಯಾವತ್ತೂ ನೆನಪಿಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರೂರಿನಲ್ಲಿ ಪತ್ತೆಯಾಗಿದ್ದ ಕೇರಳ ಟ್ರಕ್ ಡ್ರೈವರ್ ಅರ್ಜುನ್ ನದ್ದು ಹೌದೋ, ಇಲ್ಲವೇ ಎನ್ನುವುದಕ್ಕೆ ಸಿಕ್ತು ಉತ್ತರ