Select Your Language

Notifications

webdunia
webdunia
webdunia
webdunia

ಕಾರ್ಮಿಕರ ದಿನಾಚರಣೆ ಆರಂಭವಾಗಿದ್ದು ಹೇಗೆ

Labour day

Krishnaveni K

ಬೆಂಗಳೂರು , ಬುಧವಾರ, 1 ಮೇ 2024 (07:13 IST)
Photo Courtesy: Twitter
ಬೆಂಗಳೂರು: ನಮ್ಮ ದೈನಂದಿನ ಕೆಲಸಗಳು ನಡೆಯಬೇಕಾದರೆ ಹೆಜ್ಜೆ ಹೆಜ್ಜೆಗೂ ಕಾರ್ಮಿಕರ ಅಗತ್ಯವಿದೆ. ಇಂದು ಆ ಶ್ರಮಿಕ ವರ್ಗಕ್ಕೆ ಮುಡಿಪಾದ ದಿನ. ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ. ಇದರ ಹಿನ್ನಲೆ ಬಗ್ಗೆ ತಿಳಿದುಕೊಳ್ಳೋಣ.

ಕಾರ್ಮಿಕರ ದಿನಾಚರಣೆ ಮೊದಲು ಆರಂಭವಾಗಿದ್ದು ಅಮೆರಿಕಾದಲ್ಲಿ. 1886 ರಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಭಾರತದಲ್ಲಿ ಈ ಆಚರಣೆ ಶುರುವಾಗಿದ್ದು 1923 ರಲ್ಲಿ. ಚೆನ್ನೈನಲ್ಲಿ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಕಾರ್ಮಿಕರ ದಿನವನ್ನು ಮೊದಲ ಬಾರಿಗೆ ಆಚರಿಸಿತು.

ಇದೀಗ ಭಾರತ ಮಾತ್ರವಲ್ಲದೆ, ಅನೇಕ ರಾಷ್ಟ್ರಗಳಲ್ಲಿ ಮೇ 1 ರಂದು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಾರ್ಮಿಕರು ಕಷ್ಟಪಟ್ಟು ದುಡಿಯದೇ ಇದ್ದರೆ ದೇಶ ಅಭಿವೃದ‍್ಧಿಯಾಗಲು ಸಾಧ‍್ಯವಿಲ್ಲ. ಹೀಗಾಗಿ ಅಂತಹ ಶ್ರಮಿಕ ವರ್ಗಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.

ಕಟ್ಟಡ, ಸೇತುವೆ, ರಸ್ತೆ, ಕಾರ್ಖಾನೆಗಳು ಸೇರಿದಂತೆ ದೇಶದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳೂ ಕಾರ್ಮಿಕರ ಶ್ರಮದ ಮೇಲೆ ನಿಂತಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬಬೇಕು, ಅವರ ಹಕ್ಕುಗಳ ಸಂರಕ್ಷಣೆಯಾಗಬೇಕೆಂಬ ಉದ್ದೇಶದಿಂದ ಕಾರ್ಮಿಕರ ದಿನ ಮಹತ್ವ ಪಡೆದುಕೊಳ್ಳುತ್ತದೆ.

ಮನುಷ್ಯ ಎಷ್ಟೇ ಮುಂದುವರಿದು ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದ್ದರೂ ಕೆಲವೊಂದು ಕೆಲಸಗಳಿಗೆ ಕಾರ್ಮಿಕರಿಲ್ಲದೇ ಮುಂದೆ ಸಾಗದು. ಕಾರ್ಮಿಕರು ಹಕ್ಕು, ಸ್ವಾತಂತ್ರ್ಯವನ್ನು ಪಡೆದ ದಿನವಿಂದು. ಅಂತಹ ಕಾರ್ಮಿಕರ ಕಠಿಣ ಪರಿಶ್ರಮಕ್ಕೆ, ಸಮರ್ಪಣಾ ಮನೋಭಾವಕ್ಕೆ ಈ ದಿನ ಗೌರವ ಸಲ್ಲಿಸೋಣ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಒಂದು ವಾರ ಇನ್ನಷ್ಟು ಉರಿಬಿಸಿಲು ಎದುರಿಸಲು ಸಿದ್ಧರಾಗಿ