Webdunia - Bharat's app for daily news and videos

Install App

Tehawwur Rana: ಉಗ್ರ ತೆಹವ್ವೂರ್ ರಾಣಾ ಭೇಟಿಗೆ ಹನ್ನೆರಡೇ ಜನರಿಗೆ ಅವಕಾಶ: ಹೇಗಿದೆ ಉಗ್ರನ ಇರಿಸಿರುವ ಕೊಠಡಿ

Krishnaveni K
ಶನಿವಾರ, 12 ಏಪ್ರಿಲ್ 2025 (09:30 IST)
ನವದೆಹಲಿ: 2008 ರ ಮುಂಬೈ ದಾಳಿಯ ಪ್ರಮುಖ ರೂವಾರಿ ಉಗ್ರ ತಹವ್ವೂರ್ ರಾಣಾನನ್ನು ಈಗ ಎನ್ಐಎ ತೀವ್ರ ವಿಚಾರಣೆ ನಡೆಸುತ್ತಿದೆ. ಈತನನ್ನು ಇರಿಸಿರುವ ಬಂಧನದ ಕೊಠಡಿಗೆ ಕೇವಲ 12 ಜನರಿಗೆ ಮಾತ್ರ ಭೇಟಿಗೆ ಅವಕಾಶವಿದೆ. ಹೇಗಿದೆ ಆತನ ಕೊಠಡಿ ಇಲ್ಲಿದೆ  ವಿವರ.

ಅಮೆರಿಕಾದಿಂದ ಗಡೀಪಾರಾದ ಉಗ್ರ ರಾಣಾನನ್ನು ಎನ್ಐಎ ಅಧಿಕಾರಿಗಳು ಮೊನ್ನೆಯಷ್ಟೇ ಭಾರತಕ್ಕೆ ಕರೆತಂದು ಕೋರ್ಟ್ ಗೆ ಹಾಜರುಪಡಿಸಿದ್ದರು. ಇದೀಗ ಎನ್ ಐಎ ಕಸ್ಟಡಿಯಲ್ಲಿರುವ ಆತನನ್ನು ಮುಂಬೈ ದಾಳಿ ಕುರಿತಾಗಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಈತನನ್ನು ಭದ್ರತಾ ಕಾರಣಗಳಿಂದ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ನಲ್ಲಿರಿಸಲಾಗಿದೆ. ಎನ್ಐಎ ಕಚೇರಿ ಈಗ ಜೈಲಿನಂತಾಗಿದೆ. ಈತನನ್ನು 14*14 ಅಳತೆಯ ಕೊಠಡಿಯಲ್ಲಿರಿಸಲಾಗಿದೆ. ಇಲ್ಲಿಗೆ ಸಿಸಿಟಿವಿ ಕಣ್ಗಾವಲು ಇದ್ದು, ಆತನ ಎಲ್ಲಾ ಚಲನವಲನಗಳನ್ನು ಪ್ರತೀಕ್ಷಣವೂ ಗಮನಿಸಲಾಗುತ್ತಿದೆ.

ಆತನನ್ನು ಇರಿಸಿರುವ ಎನ್ಐಎ ಕಚೇರಿಯ ಹೊರಭಾಗದಲ್ಲಿ ದೆಹಲಿ ಪೊಲೀಸರು, ಅರೆಸೈನಿಕ ಪಡೆಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ನೆಲದ ಮೇಲೆಯೇ ಹಾಸಿಗೆ ಹಾಕಿಕೊಡಲಾಗಿದೆ. ಅಲ್ಲಿಯೇ ಊಟ, ಸ್ನಾನ, ಶೌಚಕ್ಕೆ ವ್ಯವಸ್ಥೆ ಮಾಡಲಾಗಿದೆ. ಈತನನ್ನು ಭೇಟಿ ಮಾಡಲು ಕೇವಲ 12 ಜನ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಆತನಿಗೆ ಹೊರಜಗತ್ತಿನ ಸಂಪರ್ಕವೇ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments