ಎನ್ ಡಿ ತಿವಾರಿ ಪುತ್ರನ ಕೊಲೆ ಪ್ರಕರಣ: ಪತ್ನಿಯೇ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ದು ಹೇಗೆ ಗೊತ್ತಾ?!

Webdunia
ಗುರುವಾರ, 25 ಏಪ್ರಿಲ್ 2019 (08:17 IST)
ನವದೆಹಲಿ: ರಾಜಕಾರಣಿ ಎನ್ ಡಿ ತಿವಾರಿ ಪುತ್ರ ರೋಹಿತ್ ಶೇಖರ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಪತ್ನಿಯೇ ಆರೋಪಿ ಎನ್ನುವುದು ಖಚಿತವಾಗಿದೆ.


ತಾನೇ ಪತಿಯನ್ನು ಕೊಲೆ ಮಾಡಿರುವುದನ್ನು ಪತ್ನಿ ಅಪೂರ್ವ ಒಪ್ಪಿಕೊಂಡಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಪತಿ ರೋಹಿತ್ ಜತೆಗೆ ತೀವ್ರ ಕಲಹವಾದ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಕೇವಲ ಒಂದೂವರೆ ಗಂಟೆಯಲ್ಲಿ ಸಾಕ್ಷ್ಯ ನಾಶ ಮಾಡಿದ್ದು ಬೆಳಕಿಗೆ ಬಂದಿದೆ.

ದಂಪತಿ ನಡುವಿನ ಸಂಬಂಧ ಸರಿ ಇರಲಿಲ್ಲ. ಇದೇ ಕಾರಣಕ್ಕೆ ಬೇರೆಯಾಗಲು ನಿರ್ಧರಿಸಿದ್ದರು. ಹಾಗಿದ್ದರೂ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ಜಗಳವೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಅಪೂರ್ವ ಪತಿಯನ್ನೇ ಕೊಲೆ ಮಾಡಿದ್ದಾಳೆ ಎಂದು ರೋಹಿತ್ ಕುಟುಂಬದವರು ಆರೋಪಿಸಿದ್ದರು.

ಏಪ್ರಿಲ್ 15 ರಂದು ನಡೆದ ಈ ಘಟನೆಯನ್ನು ಇದೀಗ ಸ್ವತಃ ಅಪೂರ್ವ ಒಪ್ಪಿಕೊಂಡಿದ್ದು, ಮಹಿಳಾ ಸಂಬಂಧಿಯೊಬ್ಬಳೊಂದಿಗೆ ವಿಪರೀತ ಮದ್ಯಪಾನ ಮಾಡಿದ್ದಕ್ಕೆ ಜಗಳವಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಬಳಿಕ ಪತಿಯ ರೂಂಗೆ ತೆರಳಿ ಆತ ತನ್ನನ್ನು ತಾನು ನಿಯಂತ್ರಿಸಲಾಗದ ಸ್ಥಿತಿಯಲ್ಲಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಸಂಪೂರ್ಣವಾಗಿ ಸಾಕ್ಷ್ಯ ನಾಶ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಇದೀಗ ಆರೋಪಿ ಅಪೂರ್ವರನ್ನು ಪೊಲೀಸರು ಬಂಧಿಸಿದ್ದು, ಎರಡು ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೈಕಮಾಂಡ್‌ನಲ್ಲಿ ಕೆಲ ಶಾಸಕರ ಶಕ್ತಿಪ್ರದರ್ಶನ, ಕೊನೆಗೂ ಮೌನ ಮುರಿದ ಡಿಕೆ ಶಿವಕುಮಾರ್

ಶಕ್ತಿ ಪ್ರದರ್ಶನಕ್ಕೆ ಜೈಲಿಗೂ ಕಾಲಿಟ್ರಾ ಡಿಕೆ ಶಿವಕುಮಾರ್, ಭಾರೀ ಬೆಳವಣಿಗೆ

ಕಾಂಗ್ರೆಸ್ ಸರಕಾರ ಹೋಳು; ಜನರ ಪಾಲಿಗೆ ಗೋಳು, ರೈತರಿಗೆ ಹೂಳು: ಆರ್.ಅಶೋಕ್ ಟೀಕೆ

ಸಹೋದ್ಯೋಗಿಯೊಂದಿಗಿನ ಆಫೇರ್‌ನಿಂದ 150 ಕೋಟಿ ಸಂಬಳದ ಕೆಲಸ ಕಳೆದುಕೊಂಡ ವ್ಯಕ್ತಿ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

ಮುಂದಿನ ಸುದ್ದಿ
Show comments