ಸೌದಿಯಲ್ಲಿ ಭೀಕರ ಅಪಘಾತ: ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತೆಲಂಗಾಣದ 45 ಮಂದಿ ಸಜೀವ ದಹನ

Sampriya
ಸೋಮವಾರ, 17 ನವೆಂಬರ್ 2025 (14:31 IST)
Photo Credit X
ಹೈದರಾಬಾದ್: ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತೆಲಂಗಾಣದ 45ಕ್ಕೂ ಅಧಿಕ ಮಂದಿ ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಖಾಸಗಿ ಬಸ್, ಟ್ಯಾಂಕರ್‌ಗೆ ಅಪ್ಪಳಿಸಿದ್ದಕ್ಕೆ ಬಸ್ ಹೊತ್ತಿ ಉರಿದಿದ್ದು 45ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮೃತರಲ್ಲಿ 20 ಮಹಿಳೆಯರು 12 ಮಕ್ಕಳು ಹಾಗೂ ಉಳಿದವರು ವಯಸ್ಕ ಪುರುಷರು ಎಂದು ತಿಳಿದು ಬಂದಿದೆ. ಘಟನೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಜೊತೆ ನಿರಂತರ ಸಂಪರ್ಕ ಸಾಧಿಸಿ ಸಂತ್ರಸ್ತರ ನೆರವಿಗೆ ಧಾವಿಸುವಂತೆ ತಮ್ಮ ಅಧಿಕಾರಿಗಳಿಗೆ ಸಿಎಂ ರೇವಂತ್ ರೆಡ್ಡಿ  ಸೂಚಿಸಿದ್ದಾರೆ.

ಭಾರತದಿಂದ ಕಳೆದ ನವೆಂಬರ್ 9ರಂದು ಮೆಕ್ಕಾ–ಮೇದಿನಾ ಯಾತ್ರೆಗೆ ತೆರಳಿದ್ದ ತಂಡ, ಮೆಕ್ಕಾದಲ್ಲಿ ಉಮ್ರಾ ಯಾತ್ರೆ ಮುಗಿಸಿಕೊಂಡು ಭಾನುವಾರ ಮೇದಿನಾಕ್ಕೆ ಖಾಸಗಿ ಬಸ್‌ನಲ್ಲಿ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಅವಘಡ ಸಂಭವಿಸಿದೆ ಎಂದು ವರದಿಗಳು ಹೇಳಿವೆ.

ಹೈದರಾಬಾದ್‌ನ ನಾಂಪಲ್ಲಿಯ ಅಲ್ ಮದೀನ ಅಲ್ ಮೀನಾ ಟ್ರಾವೆಲ್ ಏಜನ್ಸಿಯ ಮೂಲಕ ಒಂದು ತಂಡವು ಸೌದಿಗೆ ತೆರಳಿತ್ತು ಎಂದು ತಿಳಿದು ಬಂದಿದೆ.
<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ನಾಯಕತ್ವವೇ ಬೇಡ: ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷದಿಂದಲೇ ಬೇಡಿಕೆ

ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣ, ಸಿಬ್ಬಂದಿಗೆ ಢವಢವ

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್‌ ರಿಲೀಫ್‌

ದೆಹಲಿ ಕೆಂಪು ಕೋಟೆ ಸ್ಫೋಟ ಪ್ರಕರಣ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪ್ರಧಾನಿ ಭೇಟಿ ಮೊದಲು ಸಿಎಂ ನೆರೆ ಪರಿಹಾರ ಕೊಡಬೇಕಿತ್ತು: ಸಿಟಿ ರವಿ

ಮುಂದಿನ ಸುದ್ದಿ
Show comments