Select Your Language

Notifications

webdunia
webdunia
webdunia
webdunia

ಉಗ್ರರ ಹತ್ಯೆಗೆ ಲಿಸ್ಟ್ ರೆಡಿ ಮಾಡಿಸಿದ ನೂತನ ಗೃಹ ಸಚಿವ ಅಮಿತ್ ಶಾ

ಉಗ್ರರ ಹತ್ಯೆಗೆ ಲಿಸ್ಟ್ ರೆಡಿ ಮಾಡಿಸಿದ ನೂತನ ಗೃಹ ಸಚಿವ ಅಮಿತ್ ಶಾ
ನವದೆಹಲಿ , ಬುಧವಾರ, 5 ಜೂನ್ 2019 (10:05 IST)
ನವದೆಹಲಿ: ಕಾಶ್ಮೀರದ ಮೂಲಕ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸುವ ಪ್ರಮುಖ 10 ಉಗ್ರರನ್ನು ಹತ್ಯೆ ಮಾಡಲು ಗೃಹ ಸಚಿವ ಅಮಿತ್ ಶಾ ಹಿಟ್ ಲಿಸ್ಟ್ ರೆಡಿ ಮಾಡಿಸಿದ್ದಾರೆ.


ಕಳೆದ ಭಾರಿ ಎನ್‍ ಡಿಎ ಅಧಿಕಾರಾವಧಿಯಲ್ಲಿ ಒಟ್ಟಾರೆ 101 ಉಗ್ರರನ್ನು ಮಟ್ಟ ಹಾಕಲಾಗಿತ್ತು. ಈ ಅವಧಿಯಲ್ಲೂ ಕಂಟಕವಾಗಿರುವ ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಗೃಹ ಇಲಾಖೆ ಬಲೆ ಬೀಸಿದೆ.

ಕೇಂದ್ರ ಸಿದ್ಧಪಡಿಸಿರುವ ಉಗ್ರರ ಲಿಸ್ಟ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ರಿಯಾಜ್ ನೈಕೊ, ಅಶ್ರಫ್ ಮೌಲ್ವಿ, ಲಷ್ಕರ್ ಎ ತೊಯ್ಬಾ, ಜೈಶ್‍ ಎ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಉಗ್ರರೂ ಸೇರಿದ್ದಾರೆ.

ಈ ಉಗ್ರರ ಬೇಟೆಗೆ ಸದ್ದಿಲ್ಲದೇ ವೇದಿಕೆ ಸಜ್ಜಾಗಿದೆ. ಈ ನಡುವೆ ಕಾಶ್ಮೀರದ ಭದ್ರತಾ ಪರಿಸ್ಥಿತಿಗಳ ಕುರಿತು ಅಮಿತ್ ಶಾ ವಿವರಣೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಖುದ್ದಾಗಿ ತಾವೇ ಉಗ್ರರ ದಮನಕ್ಕೆ ಕಾರ್ಯನೀತಿ ರೂಪಿಸಲು ಗೃಹ ಸಚಿವರು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಫೀಸ್ ಮೀಟಿಂಗ್ ನಡುವೆ ಪ್ಲೇ ಆಯ್ತು ಪೋರ್ನ್ ವಿಡಿಯೋ! ಮುಂದೇನಾಯ್ತು ನೋಡಿ!