Select Your Language

Notifications

webdunia
webdunia
webdunia
webdunia

ಬಿಜೆಪಿ ಗುಂಡಾಗಿರಿಗೆ ಹೆದರಿ ಹೆಲ್ಮೆಟ್ ಧರಿಸಿ ಬಂದ ಪತ್ರಕರ್ತರು

ಬಿಜೆಪಿ ಗುಂಡಾಗಿರಿಗೆ ಹೆದರಿ ಹೆಲ್ಮೆಟ್ ಧರಿಸಿ ಬಂದ ಪತ್ರಕರ್ತರು
ರಾಯ್ಪುರ್ , ಗುರುವಾರ, 7 ಫೆಬ್ರವರಿ 2019 (15:52 IST)
ರಾಜ್ಯದ ರಾಜಧಾನಿಯಲ್ಲಿ ಪತ್ರಕರ್ತನೊಬ್ಬನ ಮೇಲೆ ಬಿಜೆಪಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಬಿಜೆಪಿ ರ್ಯಾಲಿಗೆ ಪತ್ರಕರ್ತರು ಹೆಲ್ಮೆಟ್ ಧರಿಸಿ ಬಂದ ಘಟನೆ ವರದಿಯಾಗಿದೆ.
ಬಿಜೆಪಿ ಸರಕಾರಕ್ಕೆ ಸಾಂಕೇತಿಕ ಸಂದೇಶವನ್ನು ರವಾನಿಸಲು ಇಂದು ಪತ್ರಕರ್ತರು ಹೆಲ್ಮೆಟ್ ಧರಿಸಿ ಬಂದಿದ್ದಲ್ಲದೇ ಭಾರಿ ಪೊಲೀಸ್ ಭದ್ರತೆಯಲ್ಲಿ ಆಗಮಿಸಿ ಬಿಜೆಪಿ ನಾಯಕರ ಸಂದರ್ಶನಕ್ಕೆ ಆಗಮಿಸಿ ಬಿಸಿ ಮುಟ್ಟಿಸಿದ್ದಾರೆ.
 
ದಿ ವೈಸೆಸ್ ಎನ್ನುವ ಡಿಜಿಟಲ್ ಪೋರ್ಟಲ್ ವರದಿಗಾರ ಸುಮನ್ ಪಾಂಡೆ ಬಿಜೆಪಿ ನಾಯಕರನ್ನು ಸಂದರ್ಶಿಸಲು ಆಗಮಿಸಿದ್ದಾಗ ಬಿಜೆಪಿ ಕಾರ್ಯಕರ್ತರು ಮನಬಂದಂತೆ ಥಳಿಸಿ ಹೊರಹಾಕಿದ್ದರು.
 
ಪತ್ರಕರ್ತ ಸುಮನ್ ಪಾಂಡೆ ನೀಡಿದ ದೂರಿನ ಮೇರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೀವ್ ಅಗರ್‌ವಾಲ್ ಸೇರಿದಂತೆ ನಾಲ್ವರು ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರ್ಕಾರವನ್ನು Coja ಸರ್ಕಾರ ಎಂದು ಟೀಕಿಸಿದ ಸಚಿವ ಅನಂತ್ ಕುಮಾರ್ ಹೆಗಡೆ