Publish Date: Fri, 16 Nov 2018 (19:00 IST)
Updated Date: Fri, 16 Nov 2018 (19:03 IST)
ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
ಕಬ್ಬು ಬಾಕಿ ಬಿಲ್ ಗಾಗಿ ಹೋರಾಟ ನಡೆಸುತ್ತಿದ್ದ ರೈತರಿಂದ ಆಕ್ರೋಶ ವ್ಯಕ್ತವಾಗಿದ್ದು, ವರದಿಗಾಗಿ ತೆರಳಿದ್ದ ವರದಿಗಾರರ ಮೇಲೆ ಹಲ್ಲೆಗೆ ಯತ್ನ ನಡೆಸಿರುವ ಘಟನೆ ನಡೆದಿದೆ.
ಬೆಳಗಾವಿಯ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ತಹಶಿಲ್ದಾರ ಎಮ್. ಎನ್. ಬಳಿಗಾರ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ದಿನಪತ್ರಿಕೆ ವರದಿಗಾರನ ವಾಹನಕ್ಕೆ ಒದ್ದು, ವರದಿಗಾರರನ್ನು ಎಳೆದಾಡಿ ಹಲ್ಲೆಗೆ ರೈತರು ಯತ್ನಿಸಿದ್ದಾರೆ.
ಸ್ಥಳದಲ್ಲಿ ಇದ್ದ ಪೋಲಿಸರು ಮತ್ತು ಸಾರ್ವಜನಿಕರಿಂದ ಪತ್ರಕರ್ತರ ರಕ್ಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಘಟನೆ ನಡೆದಿದೆ.