Select Your Language

Notifications

webdunia
webdunia
webdunia
webdunia

ಪತ್ರಕರ್ತನ ಕೊಲೆ ಮಾಡಿದ ರಾಮ್ ರಹೀಂಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಪತ್ರಕರ್ತನ ಕೊಲೆ ಮಾಡಿದ ರಾಮ್ ರಹೀಂಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಪಂಚಕುಲ , ಶುಕ್ರವಾರ, 18 ಜನವರಿ 2019 (06:18 IST)
ಪಂಚಕುಲ : ಪತ್ರಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಪಂಚಕುಲದ ವಿಶೇಷ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.


2002ರಲ್ಲಿ ಸ್ವಾಧ್ವಿಗಳ ಮೇಲೆ ಅತ್ಯಾಚಾರ ನಡೆಸಿದ ಬಾಬಾ ರಾಮ್ ರಹೀಂ ನ ವಿರುದ್ಧ ಪತ್ರಕರ್ತ ರಾಮ್ ಚಂದರ್ ಸರಣಿ ಲೇಖನ ಬರೆದಿದ್ದರು. ಇದರಿಂದ ಕೋಪಗೊಂಡ ಬಾಬಾ ರಾಮ್ ರಹೀಂ ಪತ್ರಕರ್ತನನ್ನು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ ಪಂಚಕುಲದ ವಿಶೇಷ ಸಿಬಿಐ ಕೋರ್ಟ್ ಇದೀಗ ಬಾಬಾ ರಾಮ್ ರಹೀಂ ಗೆ ಜೊತೆಗೆ ಇತರೆ ಮೂವರಿಗೂ ಜೀವಾವಧಿ ಶಿಕ್ಷೆ ಜೊತೆಗೆ 50 ಸಾವಿರ ದಂಡ ವಿಧಿಸಿದೆ.


ಈಗಾಗಲೇ ಹರಿಯಾಣದ ಡೇರಾ ಸಚ್ಛಾಸೌದಾದ ಸಾಧ್ವಿಗಳ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಬಾಬಾ ರಾಮ್ ರಹೀಂ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲಾಸ್ ರೂಂನಲ್ಲಿಯೇ ಶಿಕ್ಷಕರಿಗೆ ಆವಾಜ್ ಹಾಕಿದ ವಿದ್ಯಾರ್ಥಿ