Select Your Language

Notifications

webdunia
webdunia
webdunia
webdunia

ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ

ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ
ನವದೆಹಲಿ , ಬುಧವಾರ, 28 ಡಿಸೆಂಬರ್ 2022 (14:15 IST)
ನವದೆಹಲಿ : ಬುಧವಾರ ಮತ್ತೆ ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ ಹಾಗೂ ತೀವ್ರ ಚಳಿ ಹೆಚ್ಚಾಗಿದ್ದು, ಈ ವೇಳೆ ದೆಹಲಿಯ ಸುಮಾರು 100 ವಿಮಾನಗಳ ವೇಳೆಯನ್ನು ಹಾಗೂ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾತನಾಡಿ, 3 ದಿನಗಳಿಂದ ಉಂಟಾಗುತ್ತಿರುವ ಹವಮಾನ ವೈಪರೀತ್ಯದಿಂದಾಗಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿ ಬಂದಿದೆ. ಕೆಲವು ವಿಮಾನಗಳ ಮಾರ್ಗವನ್ನು ಬದಲಾಗಿದೆ ಎಂದು ತಿಳಿಸಿದರು.

ಉತ್ತರ ಭಾರತದ ಹೆಚ್ಚಿನ ಭಾಗಗಳನ್ನು ದಟ್ಟವಾದ ಮಂಜು ಆವರಿಸಿದೆ. ಇದರಿಂದಾಗಿ ವಿಮಾನ ಪ್ರಯಾಣಿಕರಿಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಕಳೆದ ಕೆಲವು ದಿನಗಳಿಂದ ದೇಶದ ಉತ್ತರ ಭಾಗಗಳ ಮೇಲೆ ಪರಿಣಾಮ ಬೀರುತ್ತಿರುವ ಕಳಪೆ ಗೋಚರತೆಯಿಂದಾಗಿ ಬುಧವಾರ ಮತ್ತೊಮ್ಮೆ ವಿಮಾನ ಸಂಚಾರವನ್ನು ಅಡ್ಡಿಪಡಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಸುನಾಮಿ : ಫ್ರಿಡ್ಜ್‌ನಂತಾದ ವಾಹನಗಳು, 38 ಮಂದಿ ಸಾವು