Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಆರೋಗ್ಯ ಸಚಿವರ ಕಾರು ಅಪಘಾತ!

webdunia
ಬುಧವಾರ, 15 ಡಿಸೆಂಬರ್ 2021 (07:41 IST)
ಡೆಹ್ರಾಡೂನ್ : ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತಕ್ಕೀಡಾದ ಘಟನೆ ಮಂಗಳವಾರ ನಡೆದಿದೆ.

ಸಚಿವ ಧಾನ್ ಸಿಂಗ್ ರಾವತ್ ಅವರು ತಮ್ಮ ಸಿಬ್ಬಂದಿಯೊಂದಿಗೆ ತಲಿಸ್ಮಾನ್ ಪಟ್ಟಣದಿಂದ ಡೆಹ್ರಾಡೂನ್ ಗೆ ಮರಳುವಾಗ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಕಾರುಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋದಲ್ಲಿ ಸಚಿವರಿದ್ದ ಕಾರು ಪಲ್ಟಿಯಾಗಿದೆ. ನಿಂತಿದ್ದ ಇನ್ನೊಂದು ಕಾರಿಗೆ ಒರಗಿದಂತಿರುವುದನ್ನು ಕಾಣಬಹುದಾಗಿದೆ.

ಘಟನೆಯಿಂದ ಸಚಿವರು ಭಾರೀ ಅವಘಡದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರ ಸಿಬ್ಬಂದಿಗೆ ಸ್ವಲ್ಪ ಮಟ್ಟಿನ ಗಾಯಗಳಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆದುಕೊಂಡಿದ್ದಾರೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆ ಸೇವಿಸದ ಮಕ್ಕಳಿಗೆ ಬಿಸಿಯೂಟಕ್ಕೆ ಚಿಕ್ಕಿ