Publish Date: Sun, 06 Sep 2020 (15:28 IST)
Updated Date: Sun, 06 Sep 2020 (15:30 IST)
ಆಟೋ ಚಾಲಕನೊಬ್ಬ ವಿಧವೆಯೊಬ್ಬಳ ಜೊತೆ ಲವ್ವಿ ಡವ್ವಿ ನಡೆಸಿ ಕೊನೆಗೆ ಮಾಡಬಾರದ್ದನ್ನು ಮಾಡಿದ್ದಾನೆ.
ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದ ಶೋಭಾ ಎನ್ನುವಳ ಜೊತೆಗೆ ಆಟೋ ಡ್ರೈವರ್ ಬಿಬಿನ್ ಎಂಬಾತ ಒಂದಷ್ಟು ದಿನ ಬಾಳು ನೀಡುವುದಾಗಿ ಹೇಳಿ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾನೆ.
ಆದರೆ ಅದೇನಾಯ್ತೋ ಏನೋ? ಆರೋಪಿ ಬಿಬಿನ್ ಮತ್ತೊಬ್ಬಳ ಜೊತೆ ಸರಸದಲ್ಲಿ ತೊಡಗಲು ಶುರುಮಾಡಿದ್ದಾನೆ.
ಈ ವಿಷಯ ವಿಧವೆ ಶೋಭಾಳಿಗೆ ಗೊತ್ತಾಗಿದೆ. ಮಾತನಾಡೋಣ ಬಾ ಅಂತ ಕರೆದಿದ್ದ ಶೋಭಾಳನ್ನು ಆಟೋದಲ್ಲಿ ಕರೆದುಕೊಂಡು ಕೊಲೆ ಮಾಡಿ ಬಿಬಿನ್ ಪರಾರಿಯಾಗಿದ್ದಾನೆ.
ಕೇರಳದ ಕಣ್ಣೂರಿನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.