Publish Date: Sun, 04 Oct 2020 (16:29 IST)
Updated Date: Sun, 04 Oct 2020 (16:31 IST)
ಹತ್ರಾಸ್ ಘಟನೆಯಲ್ಲಿ ಯುವಕರಿಂದ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಯುವತಿಯ ಹಿಂದೆ ಯುವಕರು ನಾಲ್ಕೈದು ತಿಂಗಳ ಹಿಂದಿನಿಂದಲೇ ಬೆನ್ನುಬಿದ್ದಿದ್ದರಾ?
ಇಂಥದ್ದೊಂದು ಆರೋಪವನ್ನು ಸಂತ್ರಸ್ತೆಯ ತಾಯಿ ಮಾಡಿದ್ದು, ದೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ.
ಠಾಕೂರ್ ಸಮುದಾಯದ ಲವ್ ಖುಷ್ ಮತ್ತು ಸಂದೀಪ್ ಸೇರಿದಂತೆ ಇನ್ನಿಬ್ಬರು ತಮ್ಮ 19 ವರ್ಷದ ಮಗಳ ಬೆನ್ನು ಹತ್ತಿದ್ದರು. ಎಲ್ಲಿ ಹೋದರೂ ಹಿಂಬಾಲಿಸುತ್ತಿದ್ದರು ಎಂದಿದ್ದಾರೆ.
ಹಿಂಬಾಲಿಸಿ ಹುಡುಗರು ಕಿರುಕುಳ ಕೊಡುತ್ತಿದ್ದ ಬಗ್ಗೆ ತಮ್ಮ ಬಳಿ ಯುವತಿ ಹೇಳಿಕೊಂಡಿದ್ದಳು.
ಹುರಿದು ಮುಕ್ಕಿ ತಮ್ಮ ಮಗಳ ಜೀವವನ್ನೇ ಬಲಿಪಡೆದುಕೊಂಡರು ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.