ನಿಮ್ಮ ಸ್ಕಿನ್ ರೊಟೀನ್ ಏನು ಸಾರ್.. ಹರ್ಲಿನ್ ಡಿಯೋಲ್ ಪ್ರಶ್ನೆಗೆ ನಾಚಿಕೊಂಡ ಪ್ರಧಾನಿ ಮೋದಿ video

Krishnaveni K
ಗುರುವಾರ, 6 ನವೆಂಬರ್ 2025 (11:44 IST)
ನವದೆಹಲಿ: ಮಹಿಳಾ ವಿಶ್ವಕಪ್ ಕ್ರಿಕೆಟ್ ಗೆದ್ದ ಭಾರತ ತಂಡ ನಿನ್ನೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನಿಮ್ಮ ಸ್ಕಿನ್ ರೊಟೀನ್ ಏನು ಎಂದು ಹರ್ಲಿನ್ ಡಿಯೋಲ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ನಾಚಿಕೊಂಡಿದ್ದಾರೆ.

ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮಹಿಳಾ ಕ್ರಿಕೆಟ್ ತಂಡ ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ಮೋದಿ ಮತ್ತು ಆಟಗಾರರ ಜೊತೆ ಹಲವು ಸ್ವಾರಸ್ಯಕರ ಮಾತುಕತೆ ನಡೆದಿದೆ. ಇದನ್ನು ಸ್ವತಃ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಮೋದಿ ಕೂಡಾ ತಂಡದ ಆಟಗಾರ್ತಿಯರ ಕಾಲೆಳೆದಿದ್ದಾರೆ. ಈ ವೇಳೆ ತಂಡದಲ್ಲಿ ಸದಾ ತಮಾಷೆ ಮಾಡಿಕೊಂಡು ಎಲ್ಲರನ್ನೂ ನಗಿಸುವ ಆಟಗಾರ್ತಿ ಯಾರು ಎಂದು ಪ್ರಶ್ನೆ ಎದುರಾಯ್ತು. ಆಗ ಜೆಮಿಮಾ, ಹರ್ಲಿನ್ ಡಿಯೋಲ್ ಹೆಸರು ಹೇಳಿದರು. ಇಲ್ಲಿಯೂ ಅದೇ ರೀತಿ ಎಲ್ಲರ ನಗುತ್ತಿದ್ದಿರಾ ಎಂದು ಮೋದಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಹರ್ಲಿನ್ ಇಲ್ಲ ಸಾರ್, ಇಲ್ಲಿ ಗಂಭೀರವಾಗಿರು ಎಂದು ತಂಡದಲ್ಲಿ ಎಲ್ಲರೂ ನನಗೆ ಗದರಿಸಿದ್ರು. ಅದಕ್ಕೇ ಸುಮ್ಮನಿದ್ದೆ ಎಂದಿದ್ದಾರೆ. ಇದಕ್ಕೆ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ಇದರ ನಡುವೆ ಹರ್ಲಿನ್ ‘ಸರ್ ನಿಮ್ಮ ಸ್ಕಿನ್ ರೊಟೀನ್ ಏನು, ಯಾವಾಗಲೂ ನಿಮ್ಮ ಸ್ಕಿನ್ ತುಂಬಾ ಹೊಳೆಯುತ್ತಿರುತ್ತದೆ’ ಎಂದಿದ್ದಾರೆ. ಇದಕ್ಕೆ ಮೋದಿ ಜೋರಾಗಿ ನಕ್ಕಿದ್ದಾರೆ. ಬಳಿಕ ‘ನಾನು ಇದುವರೆಗೆ ಇದರ ಬಗ್ಗೆ ಧ್ಯಾನ ನೀಡಿರಲಿಲ್ಲ’ ಎಂದಿದ್ದಾರೆ. ಇದಕ್ಕೆ ಹರ್ಲಿನ್ ಅವರೇ ‘ಬಹುಶಃ ಇದೆಲ್ಲಾಜನರ ಪ್ರೀತಿಯ ಫಲವಾಗಿರಬಹುದು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಮತಗಳ್ಳತನ ಮಾಡಿದ್ದ ಬ್ರೆಜಿಲ್ ಮಾಡೆಲ್ ಶಾಕಿಂಗ್ ರಿಯಾಕ್ಷನ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಉಡುಪಿಗೆ ಬಂದೇ ಬಿಟ್ಟರಾ ಪ್ರಧಾನಿ ಮೋದಿ: ಫೋಟೋ ನೋಡಿದ್ರೆ ನೀವೂ ಶಾಕ್ ಆಗ್ತೀರಿ

ನಂದಿನಿ ತುಪ್ಪದ ಬೆಲೆ ಜಾಸ್ತಿ ಮಾಡಿದ್ದೀರಿ ಎಂದರೆ ನೀನು ತುಪ್ಪ ತಿನ್ಬೇಡ ಸುಮ್ನಿರು ಎಂದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments