ನವದೆಹಲಿ: ಏನಾರಾ ಆಗ್ಲಿ ಜನ ಬಿಯರ್ ಕುಡಿಬೇಕು, ಆದಾಯ ಹೆಚ್ಚಾಗಬೇಕು. ಇದಕ್ಕಾಗಿ ದೆಹಲಿ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಹೊರಟಿದೆ. ಏನದು ಇಲ್ಲಿದೆ ನೋಡಿ ವಿವರ.
									
			
			 
 			
 
 			
					
			        							
								
																	ಆದಾಯ ನಷ್ಟ ತಡೆಗೆ ದೆಹಲಿ ಸರ್ಕಾರ ದಾರಿಗಳನ್ನು ಹುಡುಕುತ್ತಿದೆ. ಹೀಗಾಗಿ ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಅದರಂತೆ ಈಗ ಬಿಯರ್ ಕುಡಿಯುವವರ ವಯಸ್ಸು 21 ಕ್ಕೆ ಇಳಿಕೆ ಮಾಡಲು ಚಿಂತನೆ ನಡೆಸಿದೆ.
									
										
								
																	ಈಗಾಗಲೇ ನೋಯ್ಡಾ, ಗುರುಗ್ರಾಮ್ ಮುಂತಾದೆಡೆ ಈಗಾಗಲೇ ವಯೋಮಿತಿ ಕೆಳಗಿಳಿಸಲಾಗಿದೆ. ಇದೀಗ ದೆಹಲಿಯಲ್ಲೂ ಇದೇ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಅಕ್ರಮ ಮದ್ಯ ಮಾರಾಟಕ್ಕೂ ಕಡಿವಾಣ ಹಾಕಿದಂತಾಗುತ್ತಿದೆ ಎಂದು ಸರ್ಕಾರ ಚಿಂತನೆ ನಡೆಸಿದೆ.
									
											
							                     
							
							
			        							
								
																	ದೆಹಲಿಯಲ್ಲಿ ಸದ್ಯಕ್ಕೆ 4 ಸರ್ಕಾರೀ ನಿಗಮಗಳು ಮಾತ್ರ ಮದ್ಯದ ಅಂಗಡಿಗಳನ್ನು ನಡೆಸುತ್ತಿದೆ. ಇನ್ನೀಗ ಖಾಸಗಿ ಸಹಭಾಗಿತ್ವ ಪಡೆಯಲೂ ಚಿಂತನೆ ನಡೆಸಿದೆ. ಈ ಮೂಲಕ ಆದಾಯ ಹೆಚ್ಚಿಸಲು ಪ್ಲ್ಯಾನ್ ಮಾಡಲಾಗಿದೆ.