ನ್ಯೂಯಾರ್ಕ್: ಅಮೆರಿಕಾದ ಡಲ್ಲಾಸ್ ನಲ್ಲಿ ಕ್ಷುಲ್ಲುಕ ವಿಚಾರಕ್ಕೆ ಜಗಳವಾಗಿ ಮೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕರ್ನಾಟಕ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ ಎಂಬಾತನ ರುಂಡ ಕತ್ತರಿಸಲಾಗಿದೆ. ಈ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಲೆ ಮಾಡಿದ ವ್ಯಕ್ತಿಗೆ ಕ್ರಿಮಿನಲ್ ಹಿನ್ನಲೆಯಿದೆ ಎನ್ನಲಾಗಿದೆ. ಈತ ಚಂದ್ರಮೌಳಿ ಸಹೋದ್ಯೋಗಿ ಕೂಡಾ ಆಗಿದ್ದ. ಈತನನ್ನು ಯೋರ್ಡಾನಿಸ್ ಕೋಬೋಸ್ ಮಾರ್ಟಿನೆಝ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗೆ ಬಾಂಡ್ ರಹಿತ ಬಂಧನ ಆದೇಶ ಹೊರಡಿಸಿದ್ದಾರೆ.
ವಾಷಿಂಗ್ ಮೆಷಿನ್ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದವಾಗಿದೆ. 50 ವರ್ಷದ ಚಂದ್ರಮೌಳಿಯನ್ನು ಅವರ ಪತ್ನಿ, ಮಕ್ಕಳ ಎದುರೇ ರುಂಡ ಕತ್ತರಿಸಲಾಗಿದೆ. ರುಂಡ ಮಾರುದೂರ ಹೋಗಿ ಬಿದ್ದಿದೆ. ವಾಗ್ವಾದ ತೀವ್ರವಾಗುತ್ತಿದ್ದಂತೇ ಚಂದ್ರಮೌಳಿ ಪತ್ನಿ, ಮಕ್ಕಳಿದ್ದ ಮೋಟೆಲ್ ಕಚೇರಿಗೆ ಓಡಿದ್ದರು.
ಆದರೆ ಹಿಂದೆಯೇ ಬಂದಿದ್ದ ಆರೋಪಿ ಚಾಕುವಿನಿಂದ ತಲೆ ಕತ್ತರಿಸಿದ್ದಾನೆ. ರುಂಡ ಬೇರೆಯಾಗಿ ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದನ್ನು ನೋಡಿದರೆ ನಿಜಕ್ಕೂ ಎದೆ ಝಲ್ಲೆನಿಸುತ್ತದೆ.