Select Your Language

Notifications

webdunia
webdunia
webdunia
webdunia

ಜನರ ಖಾಸಗಿತನದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ : ಮಲ್ಲಿಕಾರ್ಜುನ ಖರ್ಗೆ

ಜನರ ಖಾಸಗಿತನದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ : ಮಲ್ಲಿಕಾರ್ಜುನ ಖರ್ಗೆ
ನವದೆಹಲಿ , ಮಂಗಳವಾರ, 13 ಜೂನ್ 2023 (14:19 IST)
ನವದೆಹಲಿ : ಕೊವೀನ್ ಆ್ಯಪ್ ಮೂಲಕ ಸಾರ್ವಜನಿಕರ ಮಾಹಿತಿ ಸೋರಿಕೆಯಾಗಿದ್ದು, ಸರ್ಕಾರ ಎಷ್ಟೆ ಮುಚ್ಚಿಟ್ಟರೂ ದೇಶದಲ್ಲಿ ಸಾರ್ವಜನಿಕರ ವೈಯಕ್ತಿಕ ಡೇಟಾ ಸುರಕ್ಷಿತವಾಗಿಲ್ಲ ಎಂಬುದು ದತ್ತಾಂಶಗಳಿಂದ ಸಾಬೀತಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಸರ್ಕಾರ ಮಾಹಿತಿಯನ್ನು ಎಷ್ಟೇ ಮುಚ್ಚಿಟ್ಟರೂ 3 ಅಂಶಗಳು ಸ್ಪಷ್ಟವಾಗಿವೆ. ದೇಶದಲ್ಲಿ ಸಾರ್ವಜನಿಕರ ವೈಯಕ್ತಿಕ ದತ್ತಾಂಶ ಸುರಕ್ಷಿತವಾಗಿಲ್ಲ, ಇದಕ್ಕಾಗಿಯೇ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ಸುಪ್ರೀಂ ಕೋರ್ಟ್ ಅನ್ನು 2017 ರಲ್ಲಿ ಮೋದಿ ಸರ್ಕಾರ ಹೇಗೆ ಬಲವಾಗಿ ವಿರೋಧಿಸಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಸೈಬರ್ ದಾಳಿಗಳು ಮತ್ತು ಡೇಟಾ ಸೋರಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. 2018ರ ವಿಶ್ವದ ಅತಿದೊಡ್ಡ ಆಧಾರ್ ಡೇಟಾ ಉಲ್ಲಂಘನೆಯಾಗಿರಬಹುದು ಅಥವಾ ನವೆಂಬರ್ 2022ರ AIIMS ಮೇಲೆ ಸೈಬರ್ ದಾಳಿಯಾಗಿರಬಹುದು.  

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿ ಅವಘಡ; ಹತ್ತಿ ಸಂಪೂರ್ಣ ಭಸ್ಮ