Select Your Language

Notifications

webdunia
webdunia
webdunia
webdunia

SBI ಗ್ರಾಹಕರಿಗೆ ಗುಡ್ನ್ಯೂಸ್

SBI ಗ್ರಾಹಕರಿಗೆ ಗುಡ್ನ್ಯೂಸ್
ಬೆಂಗಳೂರು , ಸೋಮವಾರ, 16 ಆಗಸ್ಟ್ 2021 (20:01 IST)
75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಹೊಸ ಪ್ಲಾಟಿನಂ ಠೇವಣಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯನ್ನು ಯಾವುದೇ SBI ಶಾಖೆ ಅಥವಾ SBI YONO ಆ್ಯಪ್ ಮೂಲಕ ಪಡೆಯಬಹುದು. ಎಸ್ಬಿಐ ಟ್ವೀಟ್ ಮೂಲಕ ತನ್ನ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿದೆ.

ಭಾರತದ 75 ನೇ ಸ್ವಾತಂತ್ರ್ಯ ದಿನವನ್ನು ಪ್ಲಾಟಿನಂ ಠೇವಣಿಗಳೊಂದಿಗೆ ಆಚರಿಸಲು ಇದು ಸಕಾಲವಾಗಿದೆ. ಎಸ್ಬಿಐನೊಂದಿಗೆ ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿಗಳಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತಿದ್ದೇವೆ. ಹೊಸ ಎಸ್ಬಿಐ ಪ್ಲಾಟಿನಂ ಠೇವಣಿ ಯೋಜನೆ ಆಗಸ್ಟ್ 15 ರಿಂದ 2021ರಿಂದ ಸೆಪ್ಟೆಂಬರ್ 14, 2021 ರವರೆಗೆ ಲಭ್ಯವಿರುತ್ತದೆ.  ಗ್ರಾಹಕರು ಹೆಚ್ಚಿನ ಸಂಖ್ಯೆಯ ಯೋಜನೆಯನ್ನು ಆಯ್ಕೆ ಮಾಡಿ ಎಂದು ತಿಳಿಸಿದೆ.
ಗ್ರಾಹಕರಿಗೆ ಠೇವಣಿ ಆಯ್ಕೆಗಳು ಹೀಗಿವೆ
ಪ್ಲಾಟಿನಂ 75 ದಿನಗಳು- ಪ್ಲಾಟಿನಂ 525 ದಿನಗಳು- ಪ್ಲಾಟಿನಂ 2250 ದಿನಗಳು
1. NRE ಮತ್ತು NRO ಅವಧಿ ಠೇವಣಿಗಳು (<Rs 2 ಕೋಟಿ) ಒಳಗೊಂಡಂತೆ ದೇಶೀಯ ಚಿಲ್ಲರೆ ಅವಧಿ ಠೇವಣಿಗಳು
2.( DRTD)- ಹೊಸ ಮತ್ತು ನವೀಕರಣ ಠೇವಣಿಗಳು- ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿಗಳು
3. NRE ಠೇವಣಿಗಳು 525 ದಿನಗಳು ಮತ್ತು 2250 ದಿನಗಳವರೆಗೆ ಮಾತ್ರ ಅರ್ಹವಾಗಿವೆ.
ಬಡ್ಡಿ ಪಾವತಿ  
ಅವಧಿ ಠೇವಣಿಗಳು - ಮಾಸಿಕ ಅಥವಾ ತ್ರೈಮಾಸಿಕ ಠೇವಣಿಗಳಲ್ಲಿ ಮಾತ್ರ ಪಡೆಯಬಹುದು  2 ಕೋಟಿಗಿಂತ ಕಡಿಮೆ ಇರುವ ಡಿಆರ್ಟಿಡಿಗೆ ಬಡ್ಡಿ ದರ ಮತ್ತು ಎನ್ಆರ್ಇ ಮತ್ತು ಎನ್ಆರ್ಒ ಟರ್ಮ್ ಠೇವಣಿಗಳು ಬದಲಾಗುವುದಿಲ್ಲ


Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಆರಂಭಕ್ಕೆ ಮಾರ್ಗಸೂಚಿ ಪ್ರಕಟ