Select Your Language

Notifications

webdunia
webdunia
webdunia
webdunia

ಮುಂದಿನ ದಸರಾ ವೇಳೆಗೆ ಬೆಂಗಳೂರಿನಿಂದ ಮೈಸೂರಿಗೆ ಹೋಗಲು 90 ನಿಮಿಷ ಸಾಕು..!

ಮುಂದಿನ ದಸರಾ ವೇಳೆಗೆ ಬೆಂಗಳೂರಿನಿಂದ ಮೈಸೂರಿಗೆ ಹೋಗಲು 90 ನಿಮಿಷ ಸಾಕು..!
ಬೆಂಗಳೂರು , ಸೋಮವಾರ, 16 ಆಗಸ್ಟ್ 2021 (15:58 IST)
ಬೆಂಗಳೂರು(ಆ.16): ಸಾಕಷ್ಟು ವಿಳಂಬದ ನಂತರ ಈ ಹೆದ್ದಾರಿಯ ಅಗಲೀಕರಣವು ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ತಗಲುವ ಅಂದಾಜು ವೆಚ್ಚ 7400 ಕೋಟಿ ರೂ. ಆಗಿದೆ. ಈಗಾಗಲೇ ವಿಳಂಬಗೊಂಡಿರುವ ಬೆಂಗಳೂರು-ಮೈಸೂರು ಹೆದ್ದಾರಿಯ ಅಗಲೀಕರಣವು ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹೇಳಿರುವಂತೆ ಮೈಸೂರು - ನಿಡಘಟ್ಟ (56.2 ಕಿಲೋಮೀಟರ್) ರಸ್ತೆ ಅಗಲೀಕರಣದ (47 ಕಿಲೋಮೀಟರ್) ಪ್ರಾಜೆಕ್ಟ್ 80.49 ಶೇಕಡಾ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
ಯೋಜನೆಯ ಮೊದಲ ಪ್ಯಾಕೇಜ್ ಘೋಷಣೆಯಾದೊಡನೆಯೇ ಈ ಯೋಜನೆಯು ಕ್ಷಿಪ್ರಗತಿಯಲ್ಲಿ ಆರಂಭಗೊಂಡಿತು. 2ನೇ ಪ್ಯಾಕೇಜ್ ನಿಡಘಟ್ಟ-ಮೈಸೂರು ರಸ್ತೆ ಅಗಲೀಕರಣಕ್ಕೆ (61.1 ಕಿಲೋಮೀಟರ್ಗಳು) ಘೋಷಿಸಲಾಯಿತು. ರಸ್ತೆ ಅಗಲೀಕರಣದ ಕಾರ್ಯವು ಆಮೆಗತಿಯಲ್ಲಿ ಸಾಗಿದ್ದು ಒಟ್ಟು 29.78 ಕಿಲೋಮೀಟರ್ಗಳಷ್ಟು ಕಾರ್ಯ ಮಾತ್ರ ಪೂರ್ಣಗೊಂಡಿದೆ. ಇದರಿಂದ ರಸ್ತೆ ಅಗಲೀಕರಣ ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ. ಈ ಯೋಜನೆಯ ಒಟ್ಟು 73.7% ಪೂರ್ಣಗೊಂಡಿದ್ದು, ಮುಂದಿನ ವರ್ಷ ಅಕ್ಟೋಬರ್ನಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.
ಕೋವಿಡ್ ಕಾರಣ ಅರ್ಧಕ್ಕೆ ನಿಂತಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಪುನಃ ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಫ್ಲೈಓವರ್ಗಳು ಮುಕ್ತಾಯ ಹಂತಕ್ಕೆ ಬಂದಿದ್ದು ಕೆಂಗೇರಿ ಹಾಗೂ ಕುಂಬಳಗೋಡು ನಡುವೆಯೂ ಫ್ಲೈಓವರ್ ಬರಲಿದೆ. ಈ ಹಿಂದೆ ಈ ರಸ್ತೆಯು ಹೆಚ್ಚಿನ ತಿರುವುಗಳನ್ನು ಒಳಗೊಂಡಿತ್ತು. ಆದರೆ ಈಗ ರಸ್ತೆಯನ್ನು ನೇರಗೊಳಿಸಲಾಗಿದೆ. ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಿಎಂ ಆಗಿದ್ರೆ ಲಾಕ್ಡೌನ್ ವೇಳೆ 10 ಸಾವಿರ ಕೊಡ್ತಿದ್ದೆ ಸಿದ್ದರಾಮಯ್ಯ