Select Your Language

Notifications

webdunia
webdunia
webdunia
Wednesday, 16 April 2025
webdunia

ಬ್ಯಾಂಕ್ ಗ್ರಾಹಕರಿಗೊಂದು ಆರ್ ಬಿ ಐ ನಿಂದ ಸಿಹಿ ಸುದ್ದಿ

ಆರ್ ಬಿಐ
ಮುಂಬೈ , ಶನಿವಾರ, 23 ಡಿಸೆಂಬರ್ 2017 (06:31 IST)
ಮುಂಬೈ: ಬ್ಯಾಂಕ್ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ಸಮಾಧಾನಕರವಾದ ಸುದ್ದಿಯನ್ನು ನೀಡಿದೆ. ಪ್ರೊಂಪ್ಟ್ ಕರೆಕ್ಟಿವ್ ಆ್ಯಕ್ಷನ್ ಅಡಿಯಲ್ಲಿರುವ ಯಾವ ಬ್ಯಾಂಕ್ ಗಳೂ ಬಂದ್ ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಗ್ರಾಹಕರ ವಹಿವಾಟಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದೆ.

ಪಿಸಿಎ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬ್ಯಾಂಕ್ ಗಳನ್ನು ಮುಚ್ಚಲಾಗುತಿದೆ ಅನ್ನುವ ಸುದ್ದಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದರಿಂದ ಸಹಜವಾಗಿಯೇ ಬ್ಯಾಂಕ್ ಗ್ರಾಹಕರು ಆತಂಕಗೊಂಡಿದ್ದರು.
ಜನರ ಆತಂಕವನ್ನು ಗಮನಿಸಿದ ಆರ್ ಬಿಐ ಸ್ಪಷ್ಟನೆ ನೀಡಿದೆ. ಯಾವುದೇ ಬ್ಯಾಂಕ್ ಅನ್ನು ಕೂಡ ಮುಚ್ಚುವ ಪ್ರಸ್ತಾವನೆಯೇ ಇಲ್ಲ ಎಂದು ಹೇಳಿದೆ. ಹಾಗಾಗಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಯನ್ನು ನಂಬಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ರೂಪಾನಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ