Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ಮನೆ ಮುಂದೆಯೇ ಅತ್ಯಾಚಾರ ಮಾಡ್ದ ಪಾಪಿ!

ಬಾಲಕಿಯನ್ನು ಮನೆ ಮುಂದೆಯೇ ಅತ್ಯಾಚಾರ ಮಾಡ್ದ ಪಾಪಿ!
ಲಕ್ನೋ , ಗುರುವಾರ, 20 ಜನವರಿ 2022 (07:23 IST)
ಲಕ್ನೋ : ಬಾಲಕಿಯೊಬ್ಬಳನ್ನು ಆಕೆಯ ಮನೆಯ ಹೊರಗಡೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ತಂದೆ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದಳು. 45 ವರ್ಷದ ಆರೋಪಿ ತನ್ನ ಮಗಳನ್ನು ಹೊರಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

ಅತ್ಯಾಚಾರ ವೇಳೆ ಬಾಲಕಿ ಕಿರುಚಾಡಿದ ಶಬ್ಧ ಕೇಳಿ ಸ್ಥಳಕ್ಕೆ ಧಾವಿಸಿದ ತಂದೆ ಆರೋಪಿಯೊಂದಿಗೆ ಸೆಣಸಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿ ಅತ್ಯಾಚಾರ ಎಸಗಿರುವುದಲ್ಲದೇ, ಪಿಸ್ತೂಲ್ನಿಂದ ತನ್ನ ಮೇಲೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡು ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ. ಸಮಾಜಕ್ಕೆ ಹೆದರಿ ಕುಟುಂಬಸ್ಥರು ಇಷ್ಟು ದಿನ ದೂರು ದಾಖಲಿಸಿರಲಿಲ್ಲ. ಪೊಲೀಸರು ಈ ಕುರಿತಂತೆ ತನಿಖೆ ಆರಂಭಿಸಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ