Publish Date: Wed, 17 Mar 2021 (07:33 IST)
Updated Date: Wed, 17 Mar 2021 (07:34 IST)
ಬರೇಲಿ : ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ 22 ವರ್ಷದ ಯುವತಿಯೊಬ್ಬಳು ತನ್ನ ಗೆಳೆಯನ ಮನೆಯ ಹೊರಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವರದಿ ಪ್ರಕಾರ ಯುವತಿ ಹಾಗೂ ಆಕೆಯ ಗೆಳೆಯ 3 ವರ್ಷಗಳಿಂದ ಪ್ರೀತಸುತ್ತಿದ್ದು, ದೈಹಿಕ ಸಂಬಂಧ ಹೊಂದಿದ್ದರು. ಆಧರೆ ಯುವತಿ ಆತನ ಬಳಿ ಮದುವೆಯಾಗುವಂತೆ ಕೇಳಿದರೆ ಆತ ಅದನ್ನು ನಿರಾಕರಿಸಿದ್ದಾನೆ. ಇದರಿಂದ ಬೇಸರಗೊಂಡ ಯುವತಿ ಆತನ ಮನೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿಯ ಕುಟುಂಬವು ಆಕೆಯ ಗೆಳೆಯನೇ ವಿಷ ಕುಡಿಸಿ ಕೊಲೆ ಮಾಡಿರುವುದಾಗಿ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಗೆಳೆಯನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.