Publish Date: Mon, 15 Mar 2021 (09:25 IST)
Updated Date: Mon, 15 Mar 2021 (09:27 IST)
ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ತನ್ನ ಪ್ರಿಯಕರನ ಜೊತೆ ಮದುವೆಗೆ ಸಿದ್ಧಳಾಗಿದ್ದಳು ಎನ್ನಲಾಗಿದೆ.
ವಿಜಯಪುರದ ಯುವತಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಐದು ವರ್ಷಗಳಿಂದ ಆಕೆಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಯುವಕನೊಂದಿಗೆ ಪ್ರೇಮ ಸಂಬಂಧವಿತ್ತು. ಇನ್ನು ಕೆಲವು ದಿನಗಳ ಬಳಿಕ ಆತನೊಂದಿಗೆ ಮದುವೆಗೂ ಸಿದ್ಧಳಾಗಿದ್ದಳು.
ಸಿಡಿ ಪ್ರಕರಣ ಬಯಲಾಗುತ್ತಿದ್ದಂತೇ ರಾಜ್ಯ ಬಿಟ್ಟು ತಲೆಮರೆಸಿಕೊಂಡಿದ್ದ ಯುವತಿ ತನ್ನ ಮನೆ ಮಾಲಿಕರಿಗೆ ಫೋನ್ ಮಾಡಿ ತನ್ನಿಂದಾಗಿ ನಿಮಗೆ ತೊಂದರೆಯಾಗಿದ್ದಕ್ಕೆ ಕ್ಷಮಿಸಿ. ಸದ್ಯದಲ್ಲೇ ಮನೆ ಖಾಲಿ ಮಾಡುತ್ತೇನೆಂದು ಹೇಳಿದ್ದಳು. ಇದೀಗ ಪ್ರಿಯಕರ ಮತ್ತು ಯುವತಿ ಇಬ್ಬರೂ ಅರೆಸ್ಟ್ ಆಗಿದ್ದಾರೆ.