Publish Date: Sun, 20 Aug 2017 (12:01 IST)
Updated Date: Sun, 20 Aug 2017 (12:03 IST)
ಲಕ್ನೋ: ಮಗಳ ಮೇಲೆ ಪೊಲೀಸ್ ಕಾನ್ಸ್ ಟೇಬಲ್ ಮತ್ತು ಗ್ರಾಮದ ಮುಖಂಡ ಸೇರಿಕೊಂಡು ನಡೆಸಿದ ಸಾಮೂಹಿಕ ಆತ್ಮಹತ್ಯೆ ಘಟನೆಯಿಂದ ಶಾಕ್ ಗೆ ಒಳಗಾದ ತಂದೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶುಕ್ರವಾರ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಬಹಿರ್ದೆಸೆಗೆಂದು ಬಾಲಕಿ ಹೋಗಿದ್ದಾಗ, ದುರುಳರು ಈ ಕೃತ್ಯವೆಸಗಿದ್ದಾರೆ. ಸಹಾಯಕ್ಕಾಗಿ ಬಾಲಕಿ ಕೂಗಿಕೊಂಡಾಗ ಗ್ರಾಮಸ್ಥರು ಸೇರಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಈ ಘಟನೆ ತಿಳಿದ ತಕ್ಷಣ ಶಾಕ್ ಗೆ ಒಳಗಾದ ತಂದೆ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ