Daily Horoscope

Select Your Language

Notifications

webdunia
webdunia
webdunia
webdunia

ಆನ್ ಲೈನ್ ಮೀಟಿಂಗ್ ನಲ್ಲಿ ಎಡವಟ್ಟು: ಸೀನಿಯರ್ ನ್ನೇ ಹೀಗೆ ಕರೆಯೋದಾ ಮಹಿಳೆ: ಸಖತ್ ಫನ್ನಿ video

Viral video online meeting
Photo Credit: X
ವರ್ಚುವಲ್ (Online) ಆಫೀಸ್ ಸಭೆಗಳಲ್ಲಿ ಮೈಕ್ ಆನ್ ಉಳಿಡು ಎಡವಟ್ಟು ಮಾಡಿಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಆದರೆ, ಇಲ್ಲೊಬ್ಬಳು ಯುವತಿ ಆನ್‌ಲೈನ್ ಸಭೆ ನಡೆಯುತ್ತಿರುವಾಗಲೇ ಮೈಕ್ ಆಫ್ ಮಾಡಲು ಮರೆತು, ತಮ್ಮ ಸಹೋದ್ಯೋಗಿಯೊಬ್ಬರನ್ನು "ಆಫೀಸ್ ತೋತಾ" (Office Tota - ಕಚೇರಿಯ ಗಿಳಿ) ಎಂದು ತಮಾಷೆ ಮಾಡಿ ರೇಗಿಸಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
 
ನಡೆದಿದ್ದೇನು?
ಆನ್‌ಲೈನ್ ಮೀಟಿಂಗ್ ಸುದೀರ್ಘವಾಗಿ ಸಾಗುತ್ತಿದ್ದಾಗ, ಸಹೋದ್ಯೋಗಿಯೊಬ್ಬರು ಮ್ಯಾನೇಜರ್ ಹೇಳಿದ ಪ್ರತಿಯೊಂದು ಮಾತಿಗೂ ಹೂಂಗುಟ್ಟುತ್ತಾ, ಹಿರಿಯ ಅಧಿಕಾರಿಗಳ ಮಾತನ್ನೇ ಮರುಕಳಿಸುತ್ತಿದ್ದರು. ಇದನ್ನು ಗಮನಿಸಿದ ಯುವತಿ, ಪಕ್ಕದಲ್ಲಿದ್ದ ತನ್ನ ಸ್ನೇಹಿತೆಯ ಬಳಿ ಮೈಕ್ ಆಫ್ ಆಗಿದೆ ಎಂದು ಭಾವಿಸಿ ಸದ್ದಿಲ್ಲದೆ ಪಿಸುಗುಟ್ಟಿದ್ದಾಳೆ:
 
"ಇವನೊಬ್ಬ ನಿಜವಾದ ಆಫೀಸ್ 'ತೋತಾ'! ಮ್ಯಾನೇಜರ್ ಏನೇ ಹೇಳಿದ್ರೂ ಗಿಳಿಯ ತರಹ ಅದನ್ನೇ ರಿಪೀಟ್ ಮಾಡ್ತಾನೆ, ಬೇರೆ ಕೆಲಸವೇ ಇಲ್ಲ..."
 
ಆದರೆ, ದುರದೃಷ್ಟವಶಾತ್ ಆಕೆಯ ಮೈಕ್ ಆನ್ ಇತ್ತು! ಈ ಮಾತು ಸಭೆಯಲ್ಲಿದ್ದ ಮ್ಯಾನೇಜರ್ ಸೇರಿದಂತೆ ಇಡೀ ತಂಡಕ್ಕೆ ಸೈಲೆಂಟ್‌ ಆಗಿ ಕೇಳಿಸಿದೆ.
 
ಆಕೆ 'ತೋತಾ' ಎಂದು ಹೇಳಿದ ತಕ್ಷಣ ಸಭೆಯಲ್ಲಿದ್ದ ಸಹೋದ್ಯೋಗಿಯೊಬ್ಬರು, "ಹೇ, ನಿನ್ನ ಮೈಕ್ ಆನ್ ಇದೆ ನೋಡು!" ಎಂದು ಎಚ್ಚರಿಸಿದ್ದಾರೆ. ಅದನ್ನ ಕೇಳಿ ಆ ಯುವತಿ ತಕ್ಷಣವೇ ಕ್ಯಾಮೆರಾ ಹಾಗೂ ಮೈಕ್ ಆಫ್ ಮಾಡಿಕೊಂಡಿದ್ದರೂ, ಆ ಸಣ್ಣ ಸಮಯದ ಸಂಭಾಷಣೆ ಇಡೀ ಸಭೆಯನ್ನು ಶಾಕ್ ಮತ್ತು ತಮಾಷೆಯ ವಾತಾವರಣಕ್ಕೆ ತಳ್ಳಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ನಗೆಯ ಅಲೆ ಎಬ್ಬಿಸಿದ್ದಾರೆ:
pic.twitter.com/FkGBE4xSL5

 

— Saffron Aura (@Saffron_Aura) July 20, 2026

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್ ನಲ್ಲಿ ತೇಜಸ್ವಿ ಸೂರ್ಯ ಭರ್ಜರಿ ವಾದ: ಜಡ್ಜ್ ಏನು ಹೇಳಿದ್ರು ನೋಡಿ Video